ಕಲ್ಬುರ್ಗಿ: ತೊಗರಿ ಬೇಳೆ ದರ ದಿಢೀರ್ ಏರಿಕೆ ಕಂಡಿದೆ. ಒಂದು ಕೆಜಿಗೆ 100 ರೂಪಾಯಿ ಬೆಲೆ ಇದ್ದ ತೊಗರಿ ಬೇಳೆ 125 ರೂಪಾಯಿಗೆ ತಲುಪಿದ್ದು ದಿಢೀರ್ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ.
ಅತಿ ಹೆಚ್ಚು ತೊಗರಿ ಬೆಳೆಯುವ ಕಲಬುರಗಿ ಜಿಲ್ಲೆಯಲ್ಲಿಯೇ ಬೆಲೆ ಏರಿಕೆ ಕಂಡಿದೆ. ರಿಟೇಲ್ ವರ್ತಕರು ಕೆಜಿಗೆ 140 ರೂಪಾಯಿವರೆಗೂ ಮಾರಾಟ ಮಾಡುತ್ತಿದ್ದಾರೆ. ದಾಸ್ತಾನು ಕಡಿಮೆ ಇದ್ದು ಬೇಡಿಕೆಯಷ್ಟು ತೊಗರಿಬೇಳೆ ಪೂರೈಕೆಯಾಗುತ್ತಿಲ್ಲ. ಇದರಿಂದ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ.
ಡಿಸೆಂಬರ್ ವೇಳೆಗೆ ತೊಗರಿ ಮಾರುಕಟ್ಟೆಗೆ ಬರಲಿದೆ. ಸದ್ಯಕ್ಕಂತೂ ರೈತರ ಬಳಿಯೂ ದಾಸ್ತಾನು ಇಲ್ಲ. ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಏರಿಕೆಯಾಗಿದ್ದು, ಕೆಜಿಗೆ 140 ರೂಪಾಯಿವರೆಗೂ ಮಾರಾಟವಾಗುತ್ತಿದೆ ಎಂದು ಹೇಳಲಾಗಿದೆ.