ನವದೆಹಲಿ: ಅಂಚೆ ಕಚೇರಿಯ ಡಾಕ್ ಪೇ ಆಪ್ ಗೆ ಚಾಲನೆ ನೀಡಲಾಗಿದೆ. ಅಂಚೆ ಇಲಾಖೆಯಿಂದ ಯುಪಿಎ ಆಧಾರಿತ ಡಾಕ್ ಪೇ ಬಿಡುಗಡೆ ಮಾಡಲಾಗಿದ್ದು, ಮೊಬೈಲ್ ನಲ್ಲಿ ಅಂಚೆ ಬ್ಯಾಂಕಿಂಗ್ ಸೇವೆಯನ್ನು ಪಡೆಯಬಹುದು.
ಭಾರತೀಯ ಅಂಚೆ ಇಲಾಖೆ ಮತ್ತು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗ್ರಾಹಕರು ಇನ್ನು ಮುಂದೆ ಡಿಜಿಟಲ್ ಹಣಕಾಸು ಸೇವೆಯನ್ನು ಪಡೆಯಬಹುದಾಗಿದೆ. ಉಳಿತಾಯ ಖಾತೆ ಹೊಂದಿದ ಗ್ರಾಹಕರಿಗೆ ಹಣಕಾಸು ಸೇವೆ ಒದಗಿಸಲು ಮೊಬೈಲ್ ಆಪ್ ಆಪ್ ಅಭಿವೃದ್ಧಿಪಡಿಸಿದ್ದು, ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಆಪ್ ಬಿಡುಗಡೆ ಮಾಡಿದ್ದಾರೆ.
ಅಂಚೆ ಪೇಮೆಂಟ್ ಬ್ಯಾಂಕ್ ನಲ್ಲಿ ಡಿಜಿಟಲ್ ಸೇವೆ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಹಣ ಕಳುಹಿಸುವುದು, ಕ್ಯೂಆರ್ ಕೋಡ್ ಬಳಸಿ ಹಣ ಪಾವತಿಸುವ ಸೇವೆಯನ್ನು ಆಪ್ ಮೂಲಕ ಪಡೆಯಬಹುದು. ಅಂಚೆ ಕಚೇರಿ ಗ್ರಾಹಕರು ಇನ್ನು ಮುಂದೆ ತಮ್ಮ ಮನೆಯಲ್ಲೇ ಕುಳಿತುಕೊಂಡು ಮೂಲಕ ವ್ಯವಹರಿಸಬಹುದಾಗಿದೆ. ಆಪ್ ಮೂಲಕ ಗ್ರಾಹಕರು ಬ್ಯಾಂಕಿನ ಗ್ರಾಹಕರ ಜೊತೆಗೆ ಕೂಡ ವಹಿವಾಟು ನಡೆಸಬಹುದು ಎಂದು ಹೇಳಲಾಗಿದೆ.