ಚೆನ್ನೈ: ಕಳೆದ ವರ್ಷ(2020)ದಲ್ಲಿ ಕಾಲ್ ಸೆಂಟರ್ ಗೆ ಕರೆ ಮಾಡಿದ ಗ್ರಾಹಕರು ಹೆಚ್ಚು ಹೊತ್ತು ಕಾದಿದ್ದಿಲ್ಲ. 2019 ಕ್ಕೆ ಹೋಲಿಸಿದರೆ 2020 ರಲ್ಲಿ ಕರೆಗಳ ನಿರೀಕ್ಷಣಾ ಸಮಯ ಗಣನೀಯ ಇಳಿಕೆಯಾಗಿದೆ ಎಂದು ವಿಶ್ಲೇಷಣಾ ವರದಿಯೊಂದು ಹೇಳಿದೆ.
ಒಝೊನೆಟ್ ಎಂಬ ಆನ್ ಡಿಮಾಂಡ್ ಕ್ಲೌಡ್ ಕಮ್ಯುನಿಕೇಶನ್ ಟೆಲಿಫೋನಿಕ್ ಸೊಲ್ಯೂಶನ್ ಸಂಸ್ಥೆ ಅಧ್ಯಯನವೊಂದನ್ನು ನಡೆಸಿದೆ. 76,659 ಸಕ್ರಿಯ ಏಜೆಂಟರಿಂದ 150 ಮಿಲಿಯನ್ ಕಾಲ್ ಗಳ ಡೇಟಾ ಪರಿಶೀಲಿಸಿ ವಿಶ್ಲೇಷಣಾ ವರದಿ ಸಿದ್ಧ ಮಾಡಿದೆ.
ಅದರ ಪ್ರಕಾರ ಗ್ರಾಹಕರ ಕರೆಯು ಸಂಬಂಧಪಟ್ಟ ಸೇವಾ ವಿಭಾಗಕ್ಕೆ ಸಂಪರ್ಕವಾಗಲು ಸರಾಸರಿ 37 ಸೆಕೆಂಡ್ ಸಮಯ ಹಿಡಿದಿದೆ. 2019 ರಲ್ಲಿ ಕರೆ ಸಂಪರ್ಕವಾಗಲು ಕನಿಷ್ಠ 79 ಸೆಕೆಂಡ್ ಬೇಕಾಗಿತ್ತು. ಅಂದರೆ, ಕರೆ ಸಂಪರ್ಕದ ಅವಧಿ ಶೇ.53 ರಷ್ಟು ಕಡಿಮೆಯಾಗಿದೆ.
ಏಪ್ರಿಲ್ ನಿಂದ ಜೂನ್ ನಡುವಿನ ಮೂರು ತಿಂಗಳ ಕಾಲಾವಧಿಯಲ್ಲಿ ರಿಯಲ್ ಎಸ್ಟೇಟ್, ಫುಡ್ ಡೆಲಿವರಿ ಹಾಗೂ ಹೆಲ್ತ್ ಕೇರ್ ವಿಭಾಗದಲ್ಲಿ ಕರೆ ಸಂಪರ್ಕಕ್ಕೆ ಬರಲು ಅತಿ ಕಡಿಮೆ ಎಂದರೆ ಸರಾಸರಿ 25.6 ಸೆಕೆಂಡ್ ಬೇಕಾಗಿದೆ. ಇ ಕಾಮರ್ಸ್, ಇಟೆಕ್, ಇನ್ಶುರೆನ್ಸ್ ಮುಂತಾದ ವಿಭಾಗಗಳ ಕರೆ ಕನೆಕ್ಟ್ ಆಗಲು ಗರಿಷ್ಠ ಎಂದರೆ 51.6 ಸೆಕೆಂಡ್ ಹಿಡಿದಿದೆ ಎಂದು ವಿಶ್ಲೇಷಿಸಲಾಗಿದೆ.