ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿತವಾಗಿದೆ. ಒಂದೇ ತಿಂಗಳಲ್ಲಿ ಶೇಕಡ 20ರಷ್ಟು ದರ ಕುಸಿತ ಕಂಡಿದೆ.
ಕಳೆದ ಮಾರ್ಚ್ ನಲ್ಲಿ ಬ್ಯಾರಲ್ ಗೆ 129 ಡಾಲರ್ ನಷ್ಟಿದ್ದ ಕಚ್ಚಾ ತೈಲದ ದರ ಈಗ 76 ಡಾಲರ್ ಗೆ ಕುಸಿದಿದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗುವ ನಿರೀಕ್ಷೆಯಲ್ಲಿದ್ದವರಿಗೆ ಇದರ ಲಾಭ ಸಿಗುವುದು ಬಹುತೇಕ ಅನುಮಾನವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗುವ ಸಾಧ್ಯತೆ ಕ್ಷೀಣವಾಗಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ದೈಲ ದರ ಏರಿಕೆಯಾದ ಸಂದರ್ಭದಲ್ಲಿ ರಿಟೇಲ್ ದರ ಏರಿಕೆ ತಡೆ ಹಿಡಿದಿದ್ದ ಕಾರಣ ಪೆಟ್ರೋಲಿಯಂ ಕಂಪನಿಗಳು ಅನುಭವಿಸಿದ ನಷ್ಟ ತುಂಬಲು ಸರ್ಕಾರ ಮುಂದಾಗಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದರ ಭಾರಿ ಕುಸಿತ ಕಂಡಿದ್ದರೂ, ಜನಸಾಮಾನ್ಯರಿಗೆ ಇದರ ಲಾಭ ಸಿಗುವುದು ಅನುಮಾನವೆನ್ನಲಾಗಿದೆ.