ಬೆಂಗಳೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಯೋಜನೆ ಅಡಿ ರಾಜ್ಯದ ರೈತರಿಂದ ಧಾನ್ಯಗಳ ಖರೀದಿಗೆ ಅನುಮತಿ ನೀಡಲಾಗಿದೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗಳಂತಹ ಅಧಿಕೃತ ಸಂಗ್ರಹಣ ಏಜೆನ್ಸಿಗಳು ರೈತರಿಂದ 1.71 ಲಕ್ಷ ಮೆಟ್ರಿಕ್ ಟನ್ ಪರಿವರ್ತಿತ ಅಕ್ಕಿ ಸೇರಿದಂತೆ 2.25 ಲಕ್ಷ ಮೆಟ್ರಿಕ್ ಟನ್ ಭಕ್ತ ಖರೀದಿಗೆ ಅನುಮತಿ ನೀಡಲಾಗಿದೆ. ಪ್ರತಿ ಎಕರೆಯಿಂದ ಕನಿಷ್ಠ 25 ಕ್ವಿಂಟಲ್ ನಿಂದ ಗರಿಷ್ಠ 40 ಕ್ವಿಂಟಲ್ ವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ.
ಭತ್ತ(ಸಾಮಾನ್ಯ) ಕ್ವಿಂಟಲ್ ಗೆ 2183 ರೂ.ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಭತ್ತ(ಗ್ರೇಡ್ ಎ) 2203 ರೂಪಾಯಿ, ಬಿಳಿ ಜೋಳ(ಹೈಬ್ರಿಡ್) 3180 ರೂ., ಬಿಳಿ ಜೋಳ(ಮಾಲ್ದಂಡಿ) 3225 ರೂ., ರಾಗಿ 3846 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನವೆಂಬರ್ 15 ರಿಂದ ಡಿಸೆಂಬರ್ 31ರವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.