ವಿಶ್ವದಾದ್ಯಂತ ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್ ಘಟನೆ ನಡೆಯುತ್ತಲೇ ಇದೆ. ಇದೀಗ ಸರ್ಕಾರದ ಸೆಕ್ಯುರಿಟಿ ಏಜೆನ್ಸಿಗಳು ಏಳು ಹ್ಯಾಕ್ ವೆಬ್ ಸೈಟ್ ಗಳ ಹೆಸರು ಬಹಿರಂಗಪಡಿಸಿದೆ.
ಸರ್ಕಾರದ ಸೈಬರ್ ಸೆಕ್ಯೂರಿಟಿ ಏಜೆನ್ಸಿಯಾದ ಸೆರ್ಟ್ ಇನ್ ಏಳು ವೆಬ್ಸೈಟ್ ಗಳ ಮಾಹಿತಿಯನ್ನು ಹೊರಹಾಕಿ ಎಚ್ಚರಿಸಿದೆ.
ಆನ್ಲೈನ್ ಶಾಪಿಂಗ್ ವೆಬ್ ಸೈಟ್ ಗಳಲ್ಲಿ ಸ್ಕಿಮ್ಮಿಂಗ್ ಕೋಡನ್ನು ಸೇರಿಸುತ್ತಾರೆ, ಆ ಮೂಲಕ ಗ್ರಾಹಕರು ಹಂಚಿಕೊಂಡ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಸೈಬರ್ ಅಪರಾಧಿಗಳು ಕದಿಯುತ್ತಾರೆಂಬ ಮಾಹಿತಿ ಬೆಳಕಿಗೆ ಬಂದಿದೆ.
ಸೆರ್ಟ್ ಇನ್ ಪ್ರಕಾರ, ಸೈಬರ್ ಅಪರಾಧಿಗಳು ಸಾಮಾನ್ಯವಾಗಿ ಇ ಕಾಮರ್ಸ್ ಸೈಟ್ ಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮಾಡುತ್ತಾರಂತೆ. ಏಕೆಂದರೆ ಅವುಗಳ ಬಳಕೆ ಮತ್ತು ವ್ಯಾಪಕತೆ, ಜನಪ್ರಿಯತೆಯೇ ದಾಳಿಕೋರರಿಗೆ ಬಂಡವಾಳ.