ದೀಪಾವಳಿಗೆ ಇನ್ನೂ ಒಂದು ತಿಂಗಳ ಬಾಕಿಯಿದೆ. ಈಗ್ಲೇ ಪಟಾಕಿ ಹೋಲ್ಸೇಲ್ ಮಾರಾಟ ಶುರುವಾಗಿದೆ. ಆದ್ರೆ ಸಾಮಾನ್ಯ ಪಟಾಕಿಗಿಂತ ಮೊದಲೇ ದುಬಾರಿಯಾಗಿರುವ ಹಸಿರು ಪಟಾಕಿಗಳ ಬೆಲೆ ಈ ಬಾರಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಕೊರೊನಾ ಸಂದರ್ಭದಲ್ಲಿ ಹಸಿರು ಪಟಾಕಿಗಳ ತಯಾರಿಯಲ್ಲಿ ಇಳಿಕೆಯಾಗಿದೆ. ಸದ್ಯ ಶೇಕಡಾ 20ರಷ್ಟು ಮಾತ್ರ ಪಟಾಕಿ ತಯಾರಿಸಲಾಗಿದೆ. ಈ ಮಧ್ಯೆ ಪಟಾಕಿ ಖರೀದಿಸುವವರ ಸಂಖ್ಯೆ ಕಡಿಮೆಯಾದ್ರೆ ಪಟಾಕಿ ಬೆಲೆ ಶೇಕಡಾ 15ರಿಂದ 20ರಷ್ಟು ಹೆಚ್ಚಾಗಲಿದೆ ಎಂದು ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಕಾರಣಕ್ಕೆ ಬಹುತೇಕ ಕಾರ್ಖಾನೆಗಳು ಬಂದ್ ಆಗಿವೆ. ಹೊಸ ಸರಕುಗಳನ್ನು ನಿರೀಕ್ಷಿಸುವುದು ಕಷ್ಟ. ಶೇಕಡಾ 20ರಷ್ಟು ಪಟಾಕಿಯಿದ್ದು, ಅದನ್ನೇ ಮಾರಾಟ ಮಾಡಬೇಕಿದೆ. ಭಾರತೀಯ ಪರಿಸರ ಸಂಶೋಧನಾ ಸಂಸ್ಥೆ ಹಸಿರು ಪಟಾಕಿ ಸಿದ್ಧಪಡಿಸಿದೆ. ಹಸಿರು ಪಟಾಕಿ ನೋಡಲು ಸಾಮಾನ್ಯ ಪಟಾಕಿಯಂತೆ ಇರುತ್ತದೆ. ಆದ್ರೆ ಇದು ಮಾಲಿನ್ಯವನ್ನು ಶೇಕಡಾ 50ರಷ್ಟು ಕಡಿಮೆ ಮಾಡುತ್ತದೆ.
ಹಸಿರು ಪಟಾಕಿ ಮೂರು ಪ್ರಕಾರದಲ್ಲಿ ಲಭ್ಯವಿದೆ. ಒಂದು ರೀತಿಯ ಪಟಾಕಿ ಸುಡುವ ಜೊತೆಗೆ ನೀರನ್ನು ಉತ್ಪಾದಿಸುತ್ತದೆ. ಇದರಿಂದಾಗಿ ಸಲ್ಫರ್ ಮತ್ತು ಸಾರಜನಕದಂತಹ ಹಾನಿಕಾರಕ ಅನಿಲಗಳು ಅವುಗಳಲ್ಲಿ ಕರಗುತ್ತವೆ. ಇನ್ನೊಂದು ಸ್ಟಾರ್ ಕ್ರ್ಯಾಕರ್ಸ್ ಎಂದು ಕರೆಯಲಾಗುತ್ತದೆ. ಅವು ಸಾಮಾನ್ಯಕ್ಕಿಂತ ಕಡಿಮೆ ಗಂಧಕ ಮತ್ತು ಸಾರಜನಕವನ್ನು ಉತ್ಪಾದಿಸುತ್ತವೆ. ಅಲ್ಯೂಮಿನಿಯಂ ಅನ್ನು ಕನಿಷ್ಠ ಪ್ರಮಾಣದಲ್ಲಿ ಬಳಸಲಾಗುತ್ತದೆ. ಮೂರನೆಯ ವಿಧ ಸುವಾಸನೆಯುಕ್ತ ಕ್ರ್ಯಾಕರ್ಸ್. ಇದು ಕಡಿಮೆ ಮಾಲಿನ್ಯ ಮತ್ತು ವಾಸನೆಯನ್ನು ಉಂಟುಮಾಡುತ್ತದೆ.