ನವದೆಹಲಿ: ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದೆ. ಶೇಕಡ 7.04 ರಷ್ಟು ಹಣದುಬ್ಬರ ದಾಖಲಾಗಿದೆ ಏಪ್ರಿಲ್ ತಿಂಗಳಲ್ಲಿ ಶೇಕಡ 7.9 ರಷ್ಟು ಹಣದುಬ್ಬರ ಇತ್ತು.
ಹಣದುಬ್ಬರವು ಮೇ ತಿಂಗಳಲ್ಲಿ ಶೇ. 7.04 ಇಳಿಕೆಯಾಗಿದ್ದು, ಅನುಕೂಲಕರವಾದ ಪರಿಣಾಮ ಉಂಟಾಗಲಿದೆ ಎನ್ನಲಾಗಿದೆ. ಜೂನ್ 13 ರಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅನುಕೂಲಕರವಾದ ಮೂಲ ಪರಿಣಾಮದಿಂದಾಗಿ ಭಾರತದ ಮುಖ್ಯ ಚಿಲ್ಲರೆ ಹಣದುಬ್ಬರ ದರವು ಏಪ್ರಿಲ್ ನ ಸುಮಾರು 8 ವರ್ಷಗಳ ಗರಿಷ್ಠ ಶೇ. 7.79 ರಿಂದ ಮೇ ತಿಂಗಳಲ್ಲಿ ಶೇ. 7.04 ರಷ್ಟಕ್ಕೆ ಕಡಿಮೆಯಾಗಿದೆ.
ಇತ್ತೀಚಿನ ಹಣದುಬ್ಬರ ಒಮ್ಮತದ ಅಂದಾಜಿನಲ್ಲಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವು ಮೇ ತಿಂಗಳಲ್ಲಿ ಶೇ. 7.1 ಕ್ಕೆ ಇಳಿದಿದೆ. ಮೇ ತಿಂಗಳಲ್ಲಿ ಹಣದುಬ್ಬರ ಕುಸಿತವು ಭಾರತೀಯ ರಿಸರ್ವ್ ಬ್ಯಾಂಕ್(RBI) ದರ ಏರಿಕೆ ನಿಧಾನಗೊಳಿಸಬಹುದು ಎನ್ನಲಾಗಿದೆ.