ಬೆಂಗಳೂರು: ರಾಜ್ಯದ 62 ಸ್ಟಾರ್ ಹೋಟೆಲ್ ಗಳಿಗೆ ಕೈಗಾರಿಕೆ ಸ್ಥಾನಮಾನ ನೀಡಲಾಗುವುದು. ಜೊತೆಗೆ ವಿದ್ಯುತ್ ಶುಲ್ಕ, ತೆರಿಗೆಯಲ್ಲಿ ವಿನಾಯಿತಿ ನೀಡಲಾಗುವುದು.
ಇದುವರೆಗೆ ವಾಣಿಜ್ಯ ದರದಲ್ಲಿ ಹೋಟೆಲ್ ಗಳಿಗೆ ಕಟ್ಟಡದ ಆಸ್ತಿ ತೆರಿಗೆ ಮತ್ತು ವಿದ್ಯುತ್ ಶುಲ್ಕ ವಿಧಿಸಲಾಗಿದೆ. ಕೈಗಾರಿಕೆ ಸ್ಥಾನಮಾನ ನೀಡುವುದರಿಂದ ಆಸ್ತಿತೆರಿಗೆ ವಿದ್ಯುತ್ ಕಡಿಮೆಯಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಕೊರೋನಾ ಕಾರಣದಿಂದ ಪ್ರವಾಸೋದ್ಯಮ ಕ್ಷೇತ್ರ ನಲುಗಿಹೋಗಿದೆ. ಹೋಟೆಲ್ ಉದ್ಯಮ ಸೇರಿದಂತೆ ಇತರೆ ಸಂಸ್ಥೆಗಳು ಆರ್ಥಿಕ ಹಿಂಜರಿತದಿಂದ ಸಂಕಷ್ಟಕ್ಕೆ ಸಿಲುಕಿವೆ. ಹೋಟೆಲ್ ಉದ್ಯಮಕ್ಕೆ ಚೇತರಿಕೆ ನೀಡಲು ಅವುಗಳನ್ನು ಕೈಗಾರಿಕಾ ವ್ಯಾಪ್ತಿಗೆ ತಂದು ತೆರಿಗೆ, ವಿದ್ಯುತ್ ದರದಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಹೇಳಿದ್ದಾರೆ.