alex Certify ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬಹುದೊಡ್ಡ ಜಯ: ದೇಶದ ಆರ್ಥಿಕತೆಯಲ್ಲಿ ಗಣನೀಯ ಚೇತರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬಹುದೊಡ್ಡ ಜಯ: ದೇಶದ ಆರ್ಥಿಕತೆಯಲ್ಲಿ ಗಣನೀಯ ಚೇತರಿಕೆ

ಕೊರೊನಾ ವಿರುದ್ಧ ಒಂದು ವರ್ಷಗಳ ಕಾಲ ಹೋರಾಟ ನಡೆಸಿರುವ ಭಾರತ ಕೆಲ ಸಮಯದಿಂದ ಮಹಾಮಾರಿಯಿಂದ ಚೇತರಿಸಿಕೊಳ್ತಿದೆ.

ಹೀಗಾಗಿ ಮೊದಲಿನಂತೆಯೇ ಶಾಪಿಂಗ್ ಮಾಲ್​ಗಳು ಹಾಗೂ ಪಾರ್ಕಿಂಗ್​ ಲಾಟ್​​ಗಳು ಮತ್ತೆ ತುಂಬಿಕೊಳ್ತಿವೆ. ಇಷ್ಟು ಮಾತ್ರವಲ್ಲದೇ ಸಲೂನ್​ ಹಾಗೂ ರೆಸ್ಟಾರೆಂಟ್​ಗಳಲ್ಲೂ ಜನಸಂದಣಿ ಸೇರುತ್ತಿದೆ.

ಏಪ್ರಿಲ್​ 1ರಿಂದ ಆರಂಭವಾಗಲಿರುವ ಹೊಸ ಹಣಕಾಸು ವರ್ಷದಿಂದ ದೇಶದಲ್ಲಿ ಶೇಕಡಾ 11ರಷ್ಟು ಆರ್ಥಿಕ ಪ್ರಗತಿಯನ್ನ ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಾರೆ. ಇದು 2020ರಲ್ಲಿ ದಾಖಲಾಗಿದ್ದ 7.7 ಪ್ರತಿಶತವನ್ನ ಹಿಮ್ಮೆಟ್ಟಿಸಲು ಸಾಕು.

ಗ್ರಾಹಕರ ವಿಶ್ವಾಸವು ಪುನರುಜ್ಜೀವನಗೊಳ್ಳುತ್ತಿದೆ ಎಂದು ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಗವರ್ನರ್​ ಶಕ್ತಿಕಾಂತ ದಾಸ್​​ ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲದೇ ದೇಶದಲ್ಲಿ ವಿದ್ಯುತ್​ ಸೇರಿದಂತೆ ವಿವಿಧ ಶಕ್ತಿ ಸಂಪನ್ಮೂಲಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಈಗಾಗಲೇ ರಾಷ್ಟ್ರದ ಕೆಲ ದೊಡ್ಡ ಕಂಪನಿಗಳು ಭಾರತೀಯರ ಬೇಡಿಕೆಯ ಫಲವನ್ನ ಪಡೆಯುತ್ತಿವೆ. ಮುಕೇಶ್​ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್​ ಡಿಸೆಂಬರ್​ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ದಾಖಲೆಯ ಲಾಭ ಗಳಿಸಿದೆ.

ಇತ್ತ ಆದಿತ್ಯ ಬಿರ್ಲಾ ಫ್ಯಾಷನ್​​ ಬ್ರ್ಯಾಂಡ್​ ಕೂಡ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಲಾಭವನ್ನ ಗಳಿಸಿದೆ.

ಯೂನಿಲಿವರ್​ ಪಿಎಲ್​ಸಿ ನಾಲ್ಕನೇ ತ್ರೈಮಾಸಿಕದಲ್ಲಿ 20 ಪ್ರತಿಶತ ಏರಿಕೆ ಕಂಡಿದೆ. ಇನ್ನೂ ಈ ವಿಚಾರವಾಗಿ ಮಾತನಾಡಿದ ಯೂನಿಲಿವರ್​ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲನ್​ ಜೋಪ್​, ವೈರಸ್​ನೊಂದಿಗಿನ ಕಠಿಣ ಹೋರಾಟದ ಬಳಿಕ ಭಾರತ ಇದೀಗ ವ್ಯಾಪಾರ ಕ್ಷೇತ್ರದಲ್ಲಿ ಪುಟಿದೇಳುತ್ತಿದೆ ಎಂದು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...