ಕೊರೊನಾ ಹಾಗೂ ಲಾಕ್ ಡೌನ್ ಕಾರಣದಿಂದಾಗಿ ಜನರು ಮನೆಯಿಂದ ಹೊರಗೆ ಹೋಗಲು ಭಯಪಡ್ತಿದ್ದಾರೆ. ಜನರ ಓಡಾಟ ಹೆಚ್ಚಿರುವ ಮಾರುಕಟ್ಟೆ ಪ್ರದೇಶಗಳಿಗೆ ಅನೇಕರು ಹೋಗ್ತಿಲ್ಲ. ಮನೆಯಲ್ಲಿಯೇ ಕುಳಿತು ಸುರಕ್ಷಿತ ಆನ್ಲೈನ್ ಖರೀದಿಗೆ ಆದ್ಯತೆ ನೀಡ್ತಿದ್ದಾರೆ.
ಭಾರತದಲ್ಲಿ ಕೊರೊನಾಗೂ ಮೊದಲು ಆನ್‌ಲೈನ್ ವ್ಯವಹಾರವು ಶೇಕಡಾ 7 ರಷ್ಟಿತ್ತು. ಆದರೆ ಪ್ರಸ್ತುತ, ಈ ವ್ಯವಹಾರವು ಶೇಕಡಾ 7 ರಿಂದ 24 ಕ್ಕೆ ಏರಿದೆ. ನಗರದಲ್ಲಿ ಶೇಕಡಾ 42 ರಷ್ಟು ಇಂಟರ್ನೆಟ್ ಬಳಕೆದಾರರು ಆನ್‌ಲೈನ್ ಮಾಧ್ಯಮದ ಮೂಲಕ ತಮ್ಮ ಶಾಪಿಂಗ್ ಮಾಡುತ್ತಿದ್ದಾರೆ.
ಭಾರತದಲ್ಲಿ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಕೇಂದ್ರ ಸರ್ಕಾರವು ಹೆಚ್ಚಿನ ಸಂಖ್ಯೆಯ ಪಂಚಾಯಿತಿಗಳನ್ನು ಡಿಜಿಟಲ್ ತಂತ್ರಜ್ಞಾನದೊಂದಿಗೆ ಸಂಪರ್ಕಿಸಿದೆ. ಈ ಕಾರಣದಿಂದಾಗಿ, ದೇಶದ ಇ-ಕಾಮರ್ಸ್ ಮಾರುಕಟ್ಟೆ 2026 ರ ವೇಳೆಗೆ 200 ಬಿಲಿಯನ್ ಡಾಲರ್ ಆಗುವ ನಿರೀಕ್ಷೆಯಿದೆ. ಪ್ರಸ್ತುತ ಈ ವ್ಯವಹಾರವು ಸುಮಾರು 45 ಬಿಲಿಯನ್ ಡಾಲರ್ ಆಗಿದೆ.
ಜನರ ಇಂಟರ್ನೆಟ್ ಬಳಕೆಗೆ 5ಜಿ ನೆರವಾಗಲಿದೆ. ಹೆಚ್ಚಿನ ಜನರು ಡಿಜಿಟಲ್ ವಹಿವಾಟನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಭಾರತದಲ್ಲಿ ಇ-ಕಾಮರ್ಸ್ ವ್ಯವಹಾರ ಹೆಚ್ಚಾಗುತ್ತದೆ.