ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ದೇಶದ ಸಾಕಷ್ಟು ಮಂದಿ ತಂತಮ್ಮ ಮನೆಗಳಿಂದಲೇ ಕಚೇರಿಯ ಕೆಲಸಗಳನ್ನು ಮಾಡುತ್ತಿದ್ದಾರೆ.
ಈ ಬಗ್ಗೆ ಸಾಫ್ಟ್‌ವೇರ್ ಡೆವಲಪರ್ ಅಟ್ಲಾಸಿಯನ್ 65 ದೇಶಗಳಲ್ಲಿ ಸಮೀಕ್ಷೆಯೊಂದನ್ನು ನಡೆಸಿದೆ. ಮನೆಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಜನರು ನಿಗದಿತ ವೇಳೆಗಿಂತ ಮುಂಚೆಯೇ ಲಾಗಿನ್ ಅಗುವುದಲ್ಲದೇ ಕೆಲಸದ ಅವಧಿ ಮುಗಿದ ಮೇಲೆ ಲಾಗ್‌ಆಫ್ ಆಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹೀಗೆ ಆಗಿರುವ ಕಾರಣ, ಭಾರತೀಯರು ತಮ್ಮ ಕೆಲಸದ ಅವಧಿಯನ್ನು ಸರಾಸರಿ 32 ನಿಮಿಷಗಳ ಕಾಲ ವಿಸ್ತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮನೆಯಿಂದ ಆಫೀಸಿಗೆ ಹೋಗಲು ತೆಗೆದುಕೊಳ್ಳುತ್ತಿದ್ದ ಸಮಯವನ್ನು ವರ್ಕ್ ಫ್ರಂ ಹೋಂ ಉಳಿತಾಯ ಮಾಡಿದ್ದರೂ ಸಹ ನಿಗದಿತ ಅವಧಿಗಿಂತ ಹೆಚ್ಚು ಮನೆಯಿಂದಲೇ ಕೆಲಸ ಮಾಡುವ ಮೂಲಕ ಆ ಉಳಿತಾಯವೆಲ್ಲಾ ಇದರಲ್ಲೇ ಬ್ಯಾಲೆನ್ಸ್ ಆಗುತ್ತಿದೆ ಎಂದಾಯ್ತು.