
ಕೊರೊನಾ, ಲಾಕ್ ಡೌನ್ ನಿಂದಾಗಿ ಜನರು ಮನೆಯಲ್ಲಿ ಲಾಕ್ ಆಗಿದ್ದಾರೆ. ಈ ಪರಿಸ್ಥಿತಿಯಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಅನೇಕ ಟೆಲಿಕಾಂ ಕಂಪನಿಗಳು ಅಗ್ಗದ ಯೋಜನೆ ಜೊತೆ ಕೆಲ ರಿಯಾಯಿತಿ ನೀಡ್ತಿವೆ. ರಿಲಯನ್ಸ್ ಜಿಯೋ, ಶಿಯೋಮಿ, ಏರ್ಟೆಲ್ ಮತ್ತು ಒಪಿಪಿಒ ಮುಂತಾದ ಕಂಪನಿಗಳು ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿವೆ.
ರಿಲಯನ್ಸ್ ಜಿಯೋ ರಿಲಯನ್ಸ್ ಫೌಂಡೇಶನ್ ಸೇರಿ ತಿಂಗಳಿಗೆ 300 ನಿಮಿಷಗಳ ಉಚಿತ ಕರೆ ಸೌಲಭ್ಯ ನೀಡುವ ಬಗ್ಗೆ ಚರ್ಚಿಸುತ್ತಿದೆ. ಕೊರೊನಾದಿಂದಾಗಿ ರಿಚಾರ್ಜ್ ಮಾಡಲು ಸಾಧ್ಯವಾಗದ ಜಿಯೋ ಫೋನ್ ಬಳಕೆದಾರರಿಗೆ ಈ ಸೌಲಭ್ಯ ಸಿಗಲಿದೆ. ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಪ್ರತಿದಿನ 10 ನಿಮಿಷಗಳ ಕಾಲ ಉಚಿತವಾಗಿ ಮಾತನಾಡಬಹುದು.
ರಿಯಲ್ಮಿ, ತನ್ನ ಉತ್ಪನ್ನದ ವಾರಂಟಿಯನ್ನು ಜುಲೈ 31 ರವರೆಗೆ ವಿಸ್ತರಿಸಿದೆ. ಈ ಕೊಡುಗೆ ಮೇ 1 ರಿಂದ ಜೂನ್ 30 ರವರೆಗೆ ವಾರಂಟಿ ಅವಧಿ ಮುಗಿಯುವ ಉತ್ಪನ್ನಗಳಿಗೆ ಅನ್ವಯಿಸಲಿದೆ. ಈ ಉತ್ಪನ್ನಗಳಲ್ಲಿ ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿ, ಸ್ಮಾರ್ಟ್‌ವಾಚ್ ಮತ್ತು ಇಯರ್‌ಫೋನ್ ಸೇರಿವೆ.
ಶಿಯೋಮಿ ಮಿ ಮತ್ತು ರೆಡ್‌ಮಿ ವಸ್ತುಗಳ ವಾರಂಟಿಯನ್ನು ಎರಡು ತಿಂಗಳವರೆಗೆ ವಿಸ್ತರಿಸಿದೆ. ಮೇ ಮತ್ತು ಜೂನ್ 30 ರ ನಡುವೆ ಖರೀದಿಸಿದ ವಸ್ತುಗಳಿಗೆ ಈ ವಾರಂಟಿ ಅನ್ವಯಿಸುತ್ತದೆ.
ಒಪ್ಪೋ ತನ್ನ ಗ್ರಾಹಕರಿಗೆ ವಾರಂಟಿ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಿಸಿದೆ. ಲಾಕ್‌ಡೌನ್ ಸಮಯದಲ್ಲಿ ವಾರಂಟಿ ಅವಧಿ ಮುಗಿಯುವ ಸಾಧನಗಳಿಗೆ ಇದು ಅನ್ವಯಿಸುತ್ತದೆ.
ಏರ್ಟೆಲ್, ಕಡಿಮೆ ಆದಾಯದ ಗ್ರಾಹಕರಿಗೆ 49 ರೂಪಾಯಿ ರೀಚಾರ್ಜ್ ಪ್ಯಾಕ್ ಉಚಿತವಾಗಿ ನೀಡಿದೆ. ಇದರಲ್ಲಿ 38 ರೂಪಾಯಿ ಟಾಕ್ ಟೈಮ್ ಸಿಗಲಿದೆ. 100 ಎಂಬಿ ಮೊಬೈಲ್ ಡೇಟಾ ಸಿಗಲಿದೆ. ಇದರ ಸಿಂಧುತ್ವ 28 ದಿನಗಳು.