ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಿಗೆ ಅಗತ್ಯವಾದ ಆಮ್ಲಜನಕ ಪೂರೈಕೆಗಾಗಿ ಮತ್ತೊಂದು ಕ್ರಮಕೈಗೊಳ್ಳಲಾಗಿದ್ದು, ಆಮ್ಲಜನಕ ಟ್ಯಾಂಕರ್ ಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಮಾಹಿತಿ ನೀಡಿದ್ದು, ದ್ರವೀಕೃತ ವೈದ್ಯಕೀಯ ಆಮ್ಲಜನಕ ಸಾಗಣೆ ಮಾಡುವ ಟ್ಯಾಂಕರ್ ಗಳಿಗೆ ಹೆದ್ದಾರಿಗಳಲ್ಲಿ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ.
ದೇಶಾದ್ಯಂತ ಕೊರೊನಾ ಸೋಂಕಿತರಿಗಾಗಿ ವೈದ್ಯಕೀಯ ಆಮ್ಲಜನಕಕ್ಕೆ ಭಾರಿ ಬೇಡಿಕೆ ಇರುವ ಕಾರಣ ತುರ್ತು ಸೇವೆ ಎಂದು ಪರಿಗಣಿಸಲಾಗಿದ್ದು, ಎರಡು ತಿಂಗಳ ಕಾಲ ಅಥವಾ ಮುಂದಿನ ಆದೇಶದವರೆಗೆ ಟೋಲ್ ಶುಲ್ಕ ವಿನಾಯಿತಿ ನೀಡಲಾಗಿದೆ. ಆಮ್ಲಜನಕ ಸಾಗಣೆ ಟ್ಯಾಂಕರ್ ಗಳು ತಡೆಯಿಲ್ಲದೆ ಸಂಚರಿಸಲು ಆದ್ಯತೆ ನೀಡಲಾಗಿದೆ.