ಹೆಚ್ಚಿನ ಕೊರೊನಾ ಲಸಿಕೆ ತಯಾರಕ ಕಂಪನಿಗಳು ಪ್ರತಿ ಡೋಸ್ಗೆ 700 ರಿಂದ 1000 ರೂಪಾಯಿ ನಿಗದಿ ಮಾಡುವ ನಿರೀಕ್ಷೆ ಹೊಂದಿದೆ. ಈ ವರ್ಷ ಕೊರೊನಾ ಲಸಿಕೆಗಳನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ವೇಳೆ ಸರ್ಕಾರ ಪ್ರತಿ ಡೋಸ್ಗೆ 250 ರೂಪಾಯಿ ನಿಗದಿ ಮಾಡಿತ್ತು.
ಸೇರಂ ಇನ್ಸ್ಟಿಟ್ಯೂಟ್ನ ಸಿಇಓ ಆಧಾರ್ ಪೂನವಲಾ ಈ ವಿಚಾರವಾಗಿ ಮಾತನಾಡಿ ಖಾಸಗಿ ಮಾರುಕಟ್ಟೆಯಲ್ಲಿ ಕೋವಿಶೀಲ್ಡ್ಗೆ ಸುಮಾರು 1000 ರೂಪಾಯಿ ಮುಂದಿನ ದಿನಗಳಲ್ಲಿ ನಿಗದಿಯಾಗಲಿದೆ ಎಂದು ಹೇಳಿದ್ರು. ಇನ್ನು ಡಾ. ರೆಡ್ಡೀಸ್ ಆಮದು ಮಾಡಿಕೊಂಡಿರುವ ರಷ್ಯಾದ ಸ್ಪುಟ್ನಿಕ್ ವಿಗೆ 750 ರೂಪಾಯಿ ನಿಗದಿ ಮಾಡುವ ನಿರೀಕ್ಷೆ ಇದೆ. ಈ ಬಗ್ಗೆ ಅಂತಿಮ ನಿರ್ಧಾರ ಇನ್ನೇನು ಕೆಲವೇ ದಿನಗಳಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಬೆಲೆ ನಿಗದಿ ವಿಚಾರವಾಗಿ ಔಷಧಿ ತಯಾರಕ ಕಂಪನಿಗಳು ಕೇಂದ್ರ ಸರ್ಕಾರದ ನಿಲುವಿಗಾಗಿ ಕಾಯುತ್ತಿವೆ.
ಕೇಂದ್ರ ಸರ್ಕಾರದ ಲಸಿಕೆ ಖರೀದಿ ಬೆಲೆ (ಪ್ರತಿ ಡೋಸ್ಗೆ ಸುಮಾರು 150 ರೂ.) ಕಡಿಮೆ ಇದೆ. ರಾಜ್ಯ ಸರ್ಕಾರದ ಆದ್ಯತೆ ಹಾಗೂ ಖಾಸಗಿ ಮಾರುಕಟ್ಟೆಯನ್ನ ಗಮನದಲ್ಲಿಟ್ಟುಕೊಂಡು ನಾವು ಲಸಿಕೆಗೆ ಸುಸ್ಥಿರ ಬೆಲೆ ನಿಗದಿ ಮಾಡಲು ಇಚ್ಛಿಸಿದ್ದೇವೆ. ಲಸಿಕೆಗಳ ತಯಾರಿಕೆಗೆ ಪ್ರತಿ ಕಂಪನಿಯಿಂದ ಕಂಪನಿಗೆ ತಂತ್ರಜ್ಞಾನ, ಸಲಕರಣೆ, ವಸ್ತುಗಳು ಹಾಗೂ ಆಮದು ಮಾಡಿದ ಕಚ್ಚಾ ವಸ್ತುಗಳ ಬೆಲೆ ಭಿನ್ನವಾಗಿರುತ್ತದೆ. ಈ ಅಂಶವನ್ನ ನಾವು ಕಡೆಗಣಿಸುವಂತಿಲ್ಲ. ಹೀಗಾಗಿ ಬೆಲೆಗಳು ಕಂಪನಿಯಿಂದ ಕಂಪನಿಗೆ ಭಿನ್ನವಾಗಿರುತ್ತೆ ಎಂದು ಕೋವಿಡ್ ಲಸಿಕೆ ನಿರ್ಮಾತೃ ಕಂಪನಿಗಳು ಹೇಳ್ತಿವೆ.