ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಜನರು ಕೊರೊನ ಭಯದಿಂದ ಹೊರ ಬರ್ತಿದ್ದಾರೆ. ಆದ್ರೆ ಕೊರೊನಾ ಮಾತ್ರ ಸಂಪೂರ್ಣವಾಗಿ ನಿಂತಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಕೊರೊನಾ ಸೋಂಕು ಏರ್ ಇಂಡಿಯಾ ಉದ್ಯೋಗಿಗಳನ್ನು ಬಿಟ್ಟಿಲ್ಲ. ಆರರಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಈವರೆಗೆ ಏರ್ ಇಂಡಿಯಾದ 19 ಉದ್ಯೋಗಿಗಳು ಕೊರೊನಾಕ್ಕೆ ಬಲಿಯಾಗಿದ್ದಾರೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ಕಳೆದ ವಾರ ಹಲವು ನಗರಗಳಿಗೆ ದೆಹಲಿಯಿಂದ ನಾನ್ ಸ್ಟಾಪ್ ಫ್ಲೈಟ್ ಸೇವೆ ಪ್ರಾರಂಭಿಸಿದೆ. ಹರ್ದೀಪ್ ಸಿಂಗ್ ಪುರಿ ಪ್ರಕಾರ, ವಂದೇ ಭಾರತ್ ಮಿಷನ್‌ನಲ್ಲಿ ಭಾಗಿಯಾಗಿರುವ ಸಿಬ್ಬಂದಿ ಸೇರಿದಂತೆ ಫೆಬ್ರವರಿ 1 ರವರೆಗೆ ಒಟ್ಟು 1,995 ಏರ್ ಇಂಡಿಯಾ ನೌಕರರು ಈ ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ 583 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
EPFO ಚಂದಾದಾರರಿಗೊಂದು ಮಹತ್ವದ ಮಾಹಿತಿ: ಇನ್ಮುಂದೆ ಆನ್ಲೈನ್ ನಲ್ಲಿ ಸಿಗಲ್ಲ ಈ ಸೇವೆ
ಏರ್ ಇಂಡಿಯಾ ವಕ್ತಾರರು ನೀಡಿದ ಮಾಹಿತಿಯ ಪ್ರಕಾರ, ಜನವರಿ 1 ರ ಹೊತ್ತಿಗೆ ಏರ್ ಇಂಡಿಯಾದಲ್ಲಿ 8,290 ಖಾಯಂ ನೌಕರರು ಮತ್ತು 4,060 ಗುತ್ತಿಗೆ ನೌಕರರು ಸೇರಿದಂತೆ 12,350 ಉದ್ಯೋಗಿಗಳಿದ್ದಾರೆ. ಏರೋ ಇಂಡಿಯಾದ ವೈದ್ಯಕೀಯ ಇಲಾಖೆ ನೀಡುವ ಕೊರೊನಾ ಪರೀಕ್ಷೆ ನಂತ್ರವೇ ಸಿಬ್ಬಂದಿ ಕೆಲಸಕ್ಕೆ ಬರ್ತಿದ್ದಾರೆ.