ನವದೆಹಲಿ: ವಿಮಾನಯಾನ ಸಚಿವಾಲಯದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ದೇಶಿಯ ವಿಮಾನಗಳಲ್ಲಿ ನೀಡಬಹುದಾದ ಊಟ, ತಿಂಡಿ ರದ್ದು ಮಾಡಲಾಗಿದೆ.
ಕೊರೋನಾ ಸೋಂಕು ತೀವ್ರ ಏರಿಕೆಯಾದ ಹಿನ್ನೆಲೆಯಲ್ಲಿ ವಿಮಾನಗಳಲ್ಲಿ ಊಟ, ತಿಂಡಿಯನ್ನು ರದ್ದು ಪಡಿಸಲಾಗಿದ್ದು. ವಿಮಾನಯಾನ ಸಚಿವಾಲಯದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಎರಡು ಗಂಟೆಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಹಾರಾಟ ನಡೆಸುವ ವಿಮಾನಗಳಲ್ಲಿ ಊಟ, ತಿಂಡಿ ನಿಷೇಧವಿರುತ್ತದೆ. ಮೊದಲೇ ಪ್ಯಾಕ್ ಮಾಡಿದ ತಿಂಡಿಗಳು, ಪಾನೀಯಗಳನ್ನು ಮಾತ್ರ ನೀಡಬಹುದು ಎಂದು ಹೇಳಲಾಗಿದೆ.