ನವದೆಹಲಿ: ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಜನರಿಗೆ ವಿಮೆ ಸೌಲಭ್ಯ ಕಲ್ಪಿಸುವಂತೆ ಭಾರತೀಯ ವಿಮೆ ಮಾರುಕಟ್ಟೆ ನಿಯಂತ್ರಕ ಪ್ರಾಧಿಕಾರ ಸೂಚನೆ ನೀಡಿದೆ.
ಸಾಮಾನ್ಯ ಮತ್ತು ಆರೋಗ್ಯ ವಿಮೆ ಕಂಪನಿಗಳಿಗೆ ಸೂಚನೆ ನೀಡಲಾಗಿದ್ದು, ಕೋವಿಡ್ ಕವಚ್ ಮತ್ತು ಕೋವಿಡ್ ರಕ್ಷಕ್ ಎಂದು ಕರೆಯಲಾಗಿರುವ ವಿಮೆ ಪಾಲಿಸಿ ವಿಶೇಷತೆ ಹೀಗಿದೆ. ಕೊರೋನಾ ಕವಚ್ ವಿಮೆ ಪಾಲಿಸಿಯಡಿಯಲ್ಲಿ ಕನಿಷ್ಠ 50 ಸಾವಿರ ರೂ. ಹಾಗೂ ಗರಿಷ್ಠ 5 ಲಕ್ಷ ರೂಪಾಯಿವರೆಗೆ ವಿಮೆ ಕವರೇಜ್ ಲಭ್ಯವಿದೆ.
ಕೊರೋನಾ ರಕ್ಷಕ್ ಅಡಿಯಲ್ಲಿ ಕನಿಷ್ಠ 50 ಸಾವಿರ ರೂಪಾಯಿ, ಗರಿಷ್ಠ 2.5 ಲಕ್ಷ ರೂಪಾಯಿ ಕವರೇಜ್ ಲಭ್ಯವಿದೆ. ಎಲ್ಲ ಜೀವವಿಮೆ, ಆರೋಗ್ಯವಿಮೆ, ಸಾಮಾನ್ಯ ವಿಮೆ ಕಂಪನಿಗಳು ಕಡ್ಡಾಯವಾಗಿ ಈ ವಿಮೆ ಸೌಲಭ್ಯ ಕಲ್ಪಿಸಬೇಕೆಂದು ಹೇಳಲಾಗಿದೆ.
ಈ ವಿಮೆ ಪಾಲಿಸಿಯಡಿ ಆಸ್ಪತ್ರೆಗಳಲ್ಲಿ ಕೊಠಡಿ ವೆಚ್ಚ, ಪಿಪಿಇ ಕಿಟ್, ವೈದ್ಯಕೀಯ ವೆಚ್ಚ, ಮಾಸ್ಕ್, ಗ್ಲೌಸ್ ಮೊದಲಾದವುಗಳಿಗೆ ಕವರೇಜ್ ಪಡೆಯಬಹುದು. ವಿಮೆ ಪರಿಹಾರ ಪಡೆಯಲು ಆಸ್ಪತ್ರೆಯಲ್ಲಿ ಕನಿಷ್ಠ 72 ಗಂಟೆ ದಾಖಲಾಗಿರಬೇಕೆಂದು ಹೇಳಲಾಗಿದೆ.