ಕೊರೊನಾ ವೈರಸ್ ಕಾರಣಕ್ಕೆ ಕೆಲಸ ಕಳೆದುಕೊಂಡ ನಿರುದ್ಯೋಗಿಗಳಿಗೆ ಸರ್ಕಾರ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಅಟಲ್ ಬೀಮಿಟ್ ವ್ಯಕ್ತಿ ಕಲ್ಯಾಣ್ ಯೋಜನೆ ಅಡಿಯಲ್ಲಿ ಸರ್ಕಾರ ನೀಡ್ತಿದ್ದ ಪರಿಹಾರವನ್ನು ವಿಸ್ತರಿಸಿದೆ. ಈ ಯೋಜನೆ ಲಾಭವನ್ನು ಜೂನ್ 30, 2021ರವರೆಗೆ ವಿಸ್ತರಿಸಲಾಗಿದೆ. ನೌಕರರ ರಾಜ್ಯ ವಿಮಾ ನಿಗಮದಲ್ಲಿ ನೋಂದಾಯಿತ ಕಾರ್ಮಿಕರಿಗೆ ಶೇಕಡಾ 50ರಷ್ಟು ನಿರುದ್ಯೋಗ ಲಾಭ ದೊರೆಯುತ್ತದೆ. ಸರ್ಕಾರದ ಈ ನಿರ್ಧಾರದಿಂದ 40 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಅನುಕೂಲವಾಗಲಿದೆ.
ಅಟಲ್ ಬೀಮಿಟ್ ವ್ಯಕ್ತಿ ಕಲ್ಯಾಣ ಯೋಜನೆಯಡಿ, ಉದ್ಯೋಗ ಕಳೆದುಕೊಳ್ಳುವ ನೌಕರರಿಗೆ ಸರ್ಕಾರದಿಂದ ಆರ್ಥಿಕ ಸಹಾಯ ಸಿಗುತ್ತದೆ. ಇದು ಒಂದು ರೀತಿಯ ನಿರುದ್ಯೋಗ ಭತ್ಯೆಯಾಗಿದೆ. ಇದು ಇಎಸ್‌ಐ ಯೋಜನೆಯಡಿ ಬರುವ ಉದ್ಯೋಗಿಗಳಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ. ಅಂದರೆ, ಇಎಸ್‌ಐ ಕೊಡುಗೆಯನ್ನು ಉದ್ಯೋಗಿಗಳ ಮಾಸಿಕ ವೇತನದಿಂದ ಕಡಿತಗೊಳಿಸುತ್ತಿದ್ದರೆ ಮಾತ್ರ ಲಾಭ ಸಿಗಲಿದೆ.
ನಿಯಮಗಳ ಪ್ರಕಾರ, ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡ ಈ ಉದ್ಯೋಗಿಗಳಿಗೆ ಶೇಕಡಾ 50ರಷ್ಟು ಸಂಬಳ ಈ ಯೋಜನೆಯಡಿ ಸಿಗಲಿದೆ. ಮಾರ್ಚ್ 24ರಿಂದ ಡಿಸೆಂಬರ್ 31ರವರೆ ಕೆಲಸ ಕಳೆದುಕೊಂಡ ನೌಕರರಿಗೆ ಇದ್ರ ಲಾಭ ಸಿಗಲಿದೆ. ಕ್ರಿಮಿನಲ್ ಮೊಕದ್ದಮೆ ಕಾರಣಕ್ಕೆ ಅಥವಾ ತಪ್ಪು ಕೆಲಸದಿಂದ ಉದ್ಯೋಗ ಕಳೆದುಕೊಂಡಿದ್ದ ವ್ಯಕ್ತಿಗೆ ಈ ಯೋಜನೆ ಲಾಭ ಸಿಗುವುದಿಲ್ಲ.