ಕೊರೊನಾ ವಿರುದ್ಧದ ಔಷಧಕ್ಕೆ ಭಾರತದಲ್ಲಿ ಕಂಪನಿಗಳ ನಡುವೆ ದರ ಸಮರ ಶುರುವಾಗಿದೆ. ರೆಮಡಿಸೀವರ್ ಔಷಧಿಯ ಬೆಲೆ ಸಮರ ಆರಂಭವಾಗಿದೆ.
ಫಾರ್ಮಾಸ್ಯುಟಿಕಲ್ಸ್ ಕಂಪನಿಗಳ ನಡುವೆ ಈ ಬೆಲೆ ಸಮರ ಶುರುವಾಗಿದ್ದು, ಜೈಡಸ್ ಕ್ಯಾಡಿಲಾ ಕಂಪನಿಯ ರೆಮಡಕ್ ಇಂಜೆಕ್ಷನ್ ಗೆ 2800 ರೂಪಾಯಿ ದರ ನಿಗದಿ ಮಾಡಲಾಗಿದೆ. ಸಿಪ್ಲಾ ಕಂಪನಿಯ ಸಿಪ್ರಾಮೆನಿ ಮಾತ್ರೆಗೆ 4000 ರೂಪಾಯಿ ಬೆಲೆ ಇದೆ.
ಹೆಟೆರೋ ಕಂಪನಿಯ ಕೋವಿಫಾರ್ ಮಾತ್ರೆಗೆ 5400 ರೂ., ಮೈಲಾನ್ ಕಂಪನಿಯ ಔಷಧಿಗೆ 4800 ರೂಪಾಯಿ ದರ ನಿಗದಿ ಮಾಡಲಾಗಿದೆ. ಜುಬಿಲೆಂಟ್ ಲೈಫ್ ಸೈನ್ಸ್ ನ ಜುಬಿ ಔಷಧಿಗೆ 4700 ರೂಪಾಯಿ ದರ ಇದೆ.
ಈ ಎಲ್ಲಾ ಔಷಧಿಗಳ ಪೈಕಿ ಅಹಮದಾಬಾದ್ ನ ಜೈಡಸ್ ಕ್ಯಾಡಿಲಾ ಕಂಪನಿಯ ರೆಮಡಿಸಿವರ್ ಇಂಜೆಕ್ಷನ್ ಬೆಲೆ ಕಡಿಮೆ ಇದೆ. ಭಾರತದಲ್ಲಿ 4 -5 ಕಂಪನಿಗಳಿಂದ ಗೀಲೆಡ್ ಸೈನ್ಸಸ್ ಜೊತೆಗೆ ಔಷಧ ಉತ್ಪಾದಿಸಿ ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ.