
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1564 ಜನರಿಗೆ ಸೋಂಕು ತಗುಲಿದ್ದು, 59 ಸೋಂಕಿತರು ಸಾವನ್ನಪ್ಪಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 28,53,643 ಕ್ಕೆ ಏರಿಕೆಯಾಗಿದೆ. ಇಂದು 4775 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 27,73,407 ಜನ ಗುಣಮುಖರಾಗಿದ್ದಾರೆ. 44,846 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 1.02 ರಷ್ಟು ಇದೆ. ರಾಜ್ಯದಲ್ಲಿ ಇದುವರೆಗೆ 35,367 ಜನ ಸಾವನ್ನಪ್ಪಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 352 ಜನರಿಗೆ ಸೋಂಕು ತಗುಲಿದ್ದು, ಮೂವರು ಸೋಂಕಿತರು ಮೃತಪಟ್ಟಿದ್ದಾರೆ. 1742 ಜನ ಇವತ್ತು ಗುಣಮುಖರಾಗಿ ಬಿಡುಗಡೆಯಾಗಿದ್ದು, 18,018 ಸಕ್ರಿಯ ಪ್ರಕರಣಗಳಿವೆ.

