ನವದೆಹಲಿ: ಕೋವಿಶೀಲ್ಡ್ ಲಸಿಕೆ ದರವನ್ನು 300 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಈ ಮೊದಲು 400 ರೂಪಾಯಿ ದರ ನಿಗದಿಪಡಿಸಲಾಗಿತ್ತು. ಅದನ್ನು 300 ರೂಪಾಯಿಗೆ ಇಳಿಕೆ ಮಾಡಲಾಗಿದೆ. ರಾಜ್ಯ ಸರ್ಕಾರಗಳಿಗೆ 300 ರೂಪಾಯಿ ದರದಲ್ಲಿ ಲಸಿಕೆ ಮಾರಾಟ ಮಾಡಲಾಗುತ್ತದೆ.
ಲಸಿಕೆ ದರ ಹೆಚ್ಚಳದ ಕುರಿತಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರ ಕೂಡ ಲಸಿಕೆ ದರ ಇಳಿಕೆಗೆ ತಯಾರಿಕಾ ಕಂಪನಿಗಳಿಗೆ ಮನವಿ ಮಾಡಿದ್ದ ಈ ಹಿನ್ನೆಲೆಯಲ್ಲಿ ದರವನ್ನು 100 ರೂಪಾಯಿ ಇಳಿಕೆ ಮಾಡಲಾಗಿದೆ.
ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆಯನ್ನು 400 ರೂ. ದರದಲ್ಲಿ ಸರ್ಕಾರಕ್ಕೆ, 600 ರೂ. ದರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ನೀಡುವುದಾಗಿ ಹೇಳಿತ್ತು.