ಬೆಂಗಳೂರು: ಕೊರೋನಾ ಲಾಕ್ಡೌನ್ ಕಾರಣದಿಂದ ಕಳೆದ ಐದು ತಿಂಗಳು ಬಂದ್ ಆಗಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಇಂದಿನಿಂದ ಓಪನ್ ಆಗಲಿವೆ.
ಸೆಪ್ಟೆಂಬರ್ 1 ರಿಂದ ಬಾರ್ ರೆಸ್ಟೋರೆಂಟ್ ಗಳಲ್ಲಿ ಮದ್ಯ ಸೇವನೆಗೆ ಅನುಮತಿ ನೀಡಲಾಗಿದೆ. ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಇಂದಿನಿಂದ ಜಾರಿಗೆ ಬರುವಂತೆ ಅಧಿಕೃತ ಆದೇಶ ಹೊರಡಿಸಲಾಗಿದ್ದು ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಮದ್ಯ ಸೇವನೆಗೆ ಅವಕಾಶ ನೀಡಲು ಸೂಚಿಸಲಾಗಿದೆ.
ಶೇಕಡ 50 ರಷ್ಟು ಗ್ರಾಹಕರೊಂದಿಗೆ ಬಾರ್, ಕ್ಲಬ್, ತೆರೆಯಲು ಅನುಮತಿ ನೀಡಲಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್. ಕ್ಲಬ್, ಸ್ಟಾರ್ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್, ಟೂರಿಸ್ಟ್ ಹೋಟೆಲ್, ಬಿಯರ್ ಲೈಸೆನ್ಸ್ ಹೊಂದಿರುವ ಟೂರಿಸ್ಟ್ ಹೋಟೆಲ್, ವಿಮಾನ ನಿಲ್ದಾಣಗಳ ಬಾರ್ ತೆರೆಯಲು ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.