ಕೋವಿಡ್ – 19 ಗೆ ಸಂಬಂಧಿಸಿದ ಯಾವುದೇ ಆರೋಗ್ಯ ವಿಮಾ ಹಕ್ಕನ್ನು 60 ನಿಮಿಷದಲ್ಲಿ ನೀಡಬೇಕೆಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸ್ಪಷ್ಟ ನಿರ್ದೇಶನ ನೀಡಿದೆ. ದೆಹಲಿ ಹೈಕೋರ್ಟ್ ಗುರುವಾರ ನೀಡಿದ ತೀರ್ಪಿನ ನಂತ್ರ ಐಆರ್‌ಡಿಎಐ ಈ ನಿರ್ದೇಶದ ನೀಡಿದೆ.
ನಗದು ರಹಿತ ಕ್ಲೇಮ್ ತ್ವರಿತವಾಗಿ ಜಾರಿಗೊಳಿಸುವಂತೆ ವಿಮಾ ಕಂಪನಿಗಳಿಗೆ ಐಆರ್‌ಡಿಎಐ ನಿರ್ದೇಶನ ನೀಡಬೇಕೆಂದು ದೆಹಲಿ ಹೈಕೋರ್ಟ್ ಆದೇಶಿಸಿತ್ತು. ಇದಾದ ನಂತ್ರ ಐಆರ್ಡಿಎಐ ನಿರ್ದೇಶನ ನೀಡಿದೆ. ಎಲ್ಲ ವಿಮಾ ಕಂಪನಿಗಳು, ಕೊರೊನಾ ರೋಗಿಗಳು ಆಸ್ಪತ್ರೆಗೆ ದಾಖಲಾದ ನಂತ್ರ ಹಾಗೂ ಅಗತ್ಯ ದಾಖಲೆ ಒದಗಿಸಿದ ಒಂದು ಗಂಟೆಯೊಳಗೆ ವಿಮೆ ಹಣ ನೀಡಬೇಕೆಂದು ಹೇಳಿದೆ.
ಇದ್ರಿಂದ ಕೊರೊನಾ ರೋಗಿಗಳಿಗೆ ನೆಮ್ಮದಿ ಸಿಗಲಿದೆ. ರೋಗಿಗಳನ್ನು ಡಿಸ್ಜಾರ್ಜ್ ಮಾಡುವದು ಸುಲಭವಾಗುವುದ್ರಿಂದ ಆಸ್ಪತ್ರೆ ಬೆಡ್ ಸಮಸ್ಯೆ ಕೂಡ ಕಡಿಮೆಯಾಗಲಿದೆ. 30ರಿಂದ 60 ನಿಮಿಷದೊಳಗೆ ರೋಗಿಗಳ ಆರೋಗ್ಯ ವಿಮೆ ಕ್ಲೇಮ್ ಮಾಡುವಂತೆ ಹೈಕೋರ್ಟ್ ಹೇಳಿದೆ. ಇದಕ್ಕೂ ಮುನ್ನ ಎರಡು ಗಂಟೆಯೊಳಗೆ ಕ್ಯಾಶ್ಲೆಸ್ ಕ್ಲೇಮ್ ಗೆ ಅವಕಾಶ ನೀಡಬೇಕೆಂದು ಹೈಕೋರ್ಟ್ ಸೂಚನೆ ನೀಡಿತ್ತು. ದೇಶದಲ್ಲಿ ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗ್ತಿಲ್ಲ. ಇದ್ರ ಮಧ್ಯೆ ವಿಮಾ ಕಂಪನಿಗಳು ನಿಧಾನ ಮಾಡ್ತಿರುವುದ್ರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗ್ತಿದೆ.