ನವದೆಹಲಿ: ಹೊಸ ವರ್ಷಕ್ಕೆ ಅಡುಗೆ ಎಣ್ಣೆ ದರ ಶೇಕಡ 15 ರಷ್ಟು ಇಳಿಕೆಯಾಗಲಿದೆ. ಭಾರಿ ಏರಿಕೆಯಾಗಿರುವ ಅಡುಗೆ ಎಣ್ಣೆ ದರ ಶೇಕಡ 10 ರಿಂದ 15 ರಷ್ಟು ಕಡಿಮೆಮಾಡಲು ಖಾದ್ಯ ತೈಲ ಉತ್ಪಾದಕ ಕಂಪನಿಗಳು ತೀರ್ಮಾನ ಕೈಗೊಂಡಿವೆ.
ರುಚಿ ಗೋಲ್ಡ್, ಜೆಮಿನಿಯ ಫ್ರೀಡಂ ಸನ್ ಫ್ಲವರ್ ಆಯಿಲ್, ರುಚಿ ಸೋಯಾ, ಫಾರ್ಚೂನ್ ಬ್ರಾಂಡ್ ಮೊದಲಾದ ಬ್ರಾಂಡ್ ಗಳ ಅಡುಗೆ ಎಣ್ಣೆ ದರ ಇಳಿಕೆಯಾಗಲಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಆಮದು ಸುಂಕವನ್ನು ಶೇಕಡ 5 ರಷ್ಟು ಕಡಿಮೆ ಮಾಡಿದ್ದು, ಹೊಸವರ್ಷಕ್ಕೆ ದರ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.
ತೈಲೋದ್ಯಮ ಒಕ್ಕೂಟ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಮುಖ ಖಾದ್ಯ ತೈಲ ಉತ್ಪಾದಕ ಕಂಪನಿಗಳು ದರ ಇಳಿಕೆ ಮಾಡಲು ತೀರ್ಮಾನಿಸಿವೆ. ಹೊಸವರ್ಷಕ್ಕೆ ಗ್ರಾಹಕರಿಗೆ ಕೊಡುಗೆ ದೊರೆಯುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.