ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಉತ್ಪಾದನೆ ಕುಂಠಿತ. ಇಳಿಕೆಯಾಗದ ಆಮದು ಸುಂಕದ ಪರಿಣಾಮ ಅಡುಗೆ ಎಣ್ಣೆ ದರ ಕಳೆದ 11 ವರ್ಷ ಗರಿಷ್ಠ ಮಟ್ಟಕ್ಕೆ ಹೆಚ್ಚಳವಾಗಿದೆ. 80 ರೂಪಾಯಿಯಿಂದ 180 ರೂಪಾಯಿವರೆಗೆ ಖಾದ್ಯ ತೈಲ ದರ ಹೆಚ್ಚಳವಾಗಿದೆ.
ಸೂರ್ಯಕಾಂತಿ, ಸೋಯಾಬಿನ್, ಸಾಸಿವೆ ಎಣ್ಣೆಗಳ ದರ ದುಬಾರಿಯಾಗಿದ್ದು, ಒಂದು ಲೀಟರ್ಗೆ 80 – 180 ರೂಪಾಯಿವರೆಗೆ ದರ ಹೆಚ್ಚಳವಾಗಿದೆ. ಜಾಗತಿಕ ಮಟ್ಟದಲ್ಲಿ ಉತ್ಪಾದನೆ ಕುಸಿತವಾಗಿರುವುದು ಮತ್ತು ಆಮದು ಸುಂಕ ಪರಿಣಾಮದಿಂದ ಅಡುಗೆ ಎಣ್ಣೆ ದರ ಹೆಚ್ಚಳವಾಗಿದೆ.
ಸೂರ್ಯಕಾಂತಿ ಎಣ್ಣೆ ಪ್ರತಿ ಲೀಟರ್ ಗೆ 165 ರಿಂದ 180 ರೂಪಾಯಿ ಇದ್ದು, ಕೆಲವು ಬ್ರಾಂಡ್ ಗಳ ಸೂರ್ಯಕಾಂತಿ ಎಣ್ಣೆ 220 ರೂಪಾಯಿವರೆಗೆ ಇದೆ. ಶೇಂಗಾ ಎಣ್ಣೆ ಒಂದು ಲೀಟರ್ಗೆ 158 ರಿಂದ 165 ರೂಪಾಯಿವರೆಗೆ ಹಾಗೂ ದೀಪದ ಎಣ್ಣೆಯ ದರ ಕೂಡ ಬಾರಿ ಹೆಚ್ಚಳವಾಗಿ 80 ರಿಂದ 140 ರೂಪಾಯಿಗೆ ಹೆಚ್ಚಳವಾಗಿದೆ.
ಕಳೆದ ವರ್ಷ ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಸೂರ್ಯಕಾಂತಿ ಎಣ್ಣೆ ಲೀಟರ್ಗೆ 105 ರೂ., ಶೇಂಗಾ ಎಣ್ಣೆ ಲೀಟರ್ಗೆ 113 ರೂಪಾಯಿ ಇತ್ತು. ನಂತರದಲ್ಲಿ ಏರುಗತಿಯಲ್ಲೇ ಸಾಗಿದ ಖಾದ್ಯ ತೈಲದ ದರ ಈಗ ಬೆಲೆ ಭಾರಿ ಜಿಗಿತವಾಗಿದೆ. ಅಗತ್ಯ ವಸ್ತುಗಳ ಜೊತೆಗೆ ಅಡುಗೆ ಎಣ್ಣೆ ದೂರ ದುಬಾರಿಯಾಗಿರುವುದರಿಂದ ಜನಸಾಮಾನ್ಯರು, ಹೋಟೆಲ್ ಉದ್ಯಮಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.