ನವದೆಹಲಿ: ಮದರ್ ಡೇರಿ ಅಉಡಗೆ ಎಣ್ಣೆ ಗರಿಷ್ಠ ಬೆಲೆಗಳನ್ನು ಪ್ರತಿ ಲೀಟರ್ ಗೆ 15 ರಿಂದ 20 ರೂ. ಇಳಿಕೆ ಮಾಡಿದೆ.
ಜಾಗತಿಕ ಬೆಲೆ ಇಳಿಕೆಗೆ ಅನುಗುಣವಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ದರ ಕಡಿತಗೊಳಿಸಲಾಗಿದ್ದು, ಪ್ರತಿ ಲೀಟರ್ ಗೆ 15 -20 ರೂ. ಕಡಿತ ಮಾಡಲಾಗಿದೆ. ಇತರೆ ಬ್ರ್ಯಾಂಡ್ ದರ ಕೂಡ ಕಡಿಮೆಯಾಗಲಿದೆ. ಧಾರಾ ಬ್ರ್ಯಾಂಡ್ ನಲ್ಲಿ ಖಾದ್ಯ ತೈಲಗಳನ್ನು ಮದರ್ ಡೇರಿ ಮಾರಾಟ ಮಾಡುತ್ತಿದೆ. ಸೋಯಾಬಿನ್ ಎಣ್ಣೆ, ರೈಸ್ ಬ್ರಾಂಡ್ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಕಡಲೆಕಾಯಿ ಎಣ್ಣೆ ಸೇರಿದಂತೆ ಹಲವು ಅಡುಗೆ ಎಣ್ಣೆ ದರ ಕಡಿಮೆಯಾಗಿದ್ದು, ಮುಂದಿನ ವಾರ ಪರಿಸ್ಕೃತ ದರ ಹೊಂದಿದ ಎಣ್ಣೆ ಪ್ಯಾಕೆಟ್ ಗಳು ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.
ಜಾಗತಿಕ ಮಾರುಕಟ್ಟೆಯ ಅನುಸಾರ ಅಡುಗೆ ಎಣ್ಣೆ ದರ ಇಳಿಕೆ ಮಾಡುವಂತೆ ಖಾದ್ಯ ತೈಲ ಉದ್ಯಮ ಸಂಸ್ಥೆಗಳ ಒಕ್ಕೂಟಕ್ಕೆ ಆಹಾರ ಸಚಿವಾಲಯದಿಂದ ನಿರ್ದೇಶನ ನೀಡಲಾಗಿತ್ತು. ಧಾರಾ ಸಂಸ್ಕರಿಸಿದ ಸೋಯಾಬಿನ್ ಎಣ್ಣೆಯ ಒಂದು ಲೀಟರ್ ಪ್ಯಾಕೆಟ್ ದರ 170 ರಿಂದ 150 ರೂ.ಗೆ ಇಳಿಕೆಯಾಗಿದೆ. ಸೂರ್ಯಕಾಂತಿ ಎಣ್ಣೆ ದರ 175 ರಿಂದ 160 ರೂ.ಗೆ ಇಳಿಕೆಯಾಗಿದ್ದು, ಕಡಲೆ ಕಾಯಿ ಎಣ್ಣೆ ದರ 255 ರೂ. ನಿಂದ 240 ರೂ.ಗೆ ಇಳಿಕೆಯಾಗಿದೆ.