ದೇಶದಲ್ಲಿ ಬಹುತೇಕರು ಬ್ಯಾಂಕ್ ಖಾತೆ ಹೊಂದಿದ್ದಾರೆ. ಬ್ಯಾಂಕ್ ಖಾತೆ ಹೊಂದಿದ ಪ್ರತಿಯೊಬ್ಬರೂ ಈ ಸುದ್ದಿ ಓದುವ ಅವಶ್ಯಕತೆಯಿದೆ. ನಿಮ್ಮ ತಪ್ಪಿನಿಂದ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾದ್ರೆ ಅದಕ್ಕೆ ಬ್ಯಾಂಕ್ ಜವಾಬ್ದಾರಿಯಾಗುವುದಿಲ್ಲ. ನಿಮಗೆ ಯಾವುದೇ ಹಣ ವಾಪಸ್ ಬರುವುದಿಲ್ಲ. ಗುಜರಾತಿನ ಅಮ್ರೆಲಿ ಜಿಲ್ಲೆಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿ ಡಿ ಆರ್ ಸಿ ಮಹತ್ವದ ಆದೇಶ ನೀಡಿದೆ.
ಅಮ್ರೆಲಿ ಜಿಲ್ಲೆಯಲ್ಲಿ ನಿವೃತ್ತ ಶಿಕ್ಷಕಿ ಖಾತೆಯಿಂದ ಯಾರೋ ಹಣವನ್ನು ವಿತ್ ಡ್ರಾ ಮಾಡಿದ್ದರು. ಸಂತ್ರಸ್ತೆ ಬ್ಯಾಂಕಿಗೆ ದೂರು ನೀಡಿದಾಗ, ಬ್ಯಾಂಕ್ ಶಿಕ್ಷಕಿ ಹೊಣೆ ಎಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸಿಡಿಆರ್‌ಸಿ ಕೂಡ ಸಂತ್ರಸ್ತರಿಗೆ ಆಘಾತ ನೀಡಿದೆ. ಏಪ್ರಿಲ್ 2, 2018 ರಂದು ಗುಜರಾತ್‌ನ ಅಮ್ರೆಲಿ ಜಿಲ್ಲೆಯ ನಿವೃತ್ತ ಶಿಕ್ಷಕಿ ಕುರ್ಜಿ ಜಾವಿಯಾಗೆ ಎಸ್‌ಬಿಐ ಮ್ಯಾನೇಜರ್ ಹೆಸರಿನಲ್ಲಿ ಫೋನ್ ಬಂದಿತ್ತು. ಎಟಿಎಂ ಪಿನ್ ಸೇರಿದಂತೆ ಎಲ್ಲ ಮಾಹಿತಿ ಕೇಳಿದ್ದರು. ಪಿಂಚಣಿ ಖಾತೆಗೆ ಬರ್ತಿದ್ದಂತೆ ಖಾತೆ ಖಾಲಿ ಮಾಡಿದ್ದರು. ಈ ಬಗ್ಗೆ ಶಿಕ್ಷಕಿ ಎಸ್ಬಿಐಗೆ ದೂರು ನೀಡಿದ್ದರು. ಎಸ್ಬಿಐ ಇದ್ರಲ್ಲಿ ತನ್ನ ತಪ್ಪಿಲ್ಲ ಎಂದಿತ್ತು.
ಶಿಕ್ಷಕಿ ಖಾತೆಯಿಂದ ವಿತ್ ಡ್ರಾ ಆಗಿದ್ದ 41,500 ರೂಪಾಯಿಗೆ ಶಿಕ್ಷಕಿಯೇ ಹೊಣೆ ಎಂದು ಈಗ ಸಿಡಿಆರ್‌ಸಿ ಹೇಳಿದೆ. ಈ ಇಡೀ ಪ್ರಕರಣದಲ್ಲಿ ಬ್ಯಾಂಕಿನ ಯಾವುದೇ ದೋಷವಿಲ್ಲ ಎಂದು ಆಯೋಗ ಹೇಳಿದೆ. ಸಿಡಿಆರ್‌ಸಿ, ಎಸ್‌ಬಿಐಗೆ ಕ್ಲೀನ್ ಚಿಟ್ ನೀಡಿದೆ. ಆರ್‌ಬಿಐ ತನ್ನ ಬ್ಯಾಂಕ್ ಖಾತೆ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಪದೇ ಪದೇ ಮನವಿ ಮಾಡುತ್ತದೆ. ಯಾವುದೇ ಮಾಹಿತಿಯನ್ನು ದೂರವಾಣಿ ಮೂಲಕ ಗ್ರಾಹಕರಿಂದ ತೆಗೆದುಕೊಳ್ಳಬಾರದು ಎಂದು ಆರ್‌ಬಿಐ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಿದೆ.