alex Certify BIG NEWS : ಕಲಬುರಗಿಯಲ್ಲಿ ‘PUC’ ವಿದ್ಯಾರ್ಥಿನಿ ಬದಲು ‘ರಾಜ್ಯಶಾಸ್ತ್ರ’ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ, 2 ದಿನ ಪೊಲೀಸ್ ಕಸ್ಟಡಿಗೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಕಲಬುರಗಿಯಲ್ಲಿ ‘PUC’ ವಿದ್ಯಾರ್ಥಿನಿ ಬದಲು ‘ರಾಜ್ಯಶಾಸ್ತ್ರ’ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ, 2 ದಿನ ಪೊಲೀಸ್ ಕಸ್ಟಡಿಗೆ.!

ಕಲಬುರಗಿ : ಪಿಯುಸಿ ವಿದ್ಯಾರ್ಥಿನಿ ಬದಲು ರಾಜ್ಯಶಾಸ್ತ್ರ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆಯನ್ನು ಪೊಲೀಸರು ಬಂಧಿಸಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಪಾಟೀಲ್ ಅವರನ್ನು ಇಲ್ಲಿನ 4 ನೇ ಜೆಎಂಎಫ್ ಸಿ ಕೋರ್ಟ್ 2 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಜಿಲ್ಲೆಯ ಮಿಲಿಂದ್ ಕಾಲೇಜಿನಲ್ಲಿ ಈಕೆ ವಿದ್ಯಾರ್ಥಿನಿ ಬದಲಿಗೆ ಪರೀಕ್ಷೆ ಬರೆದು ಬಂಧನಕ್ಕೊಳಗಾಗಿದ್ದರು.. ಮಾ.5 ರಂದು ರಾಜ್ಯಶಾಸ್ತ್ರ ಪರೀಕ್ಷೆ ನಡೆದಿತ್ತು, ಅರ್ಚನಾ ಎಂಬ ವಿದ್ಯಾರ್ಥಿನಿ ಬದಲಿಗೆ ಕಾನೂನು ವಿದ್ಯಾರ್ಥಿನಿ /ಕಾಂಗ್ರೆಸ್ ಕಾರ್ಯಕರ್ತೆ ಸಂಪೂರ್ಣ ಪಾಟೀಲ್ ಎಂಬುವವರು ಪರೀಕ್ಷೆ ಬರೆದಿದ್ದರು.

ಕಾರ್ಯಕರ್ತರ ಸಂಘಟನೆಯೊಂದು ಕಾಲೇಜಿನಲ್ಲಿ ಅಕ್ರಮವನ್ನು ಪ್ರಶ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಿಲಿಂದ್ ಶಾಲೆಯ ಪ್ರಾಂಶುಪಾಲರು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...