
ತನ್ನ ಶಾಖೆಗಳಲ್ಲಿ ಭಾರೀ ಮೊತ್ತದ ಠೇವಣಿ ಇಡುವ ಮಂದಿಗೆ ’ಪಯನೀರ್ ಹೆರಿಟೇಜ್’ ಹೆಸರಿನ ವಿಶೇಷ ಮೆಟಲ್ ಕಾರ್ಡ್ ಬಿಡುಗಡೆ ಮಾಡಿದೆ ಇಂಡಸ್ ಇಂಡ್ ಬ್ಯಾಂಕ್.
ಟ್ರಾವೆಲ್, ವೆಲ್‌ನೆಸ್, ಲೈಫ್‌ಸ್ಟೈಲ್ ಸೇರಿದಂತೆ ಅನೇಕ ವಿಚಾರಗಳಲ್ಲಿ ಸಾಕಷ್ಟು ಆಫರ್‌ಗಳನ್ನು ಕೊಡಮಾಡುವ ಅನೇಕ ಫೀಚರ್‌ಗಳನ್ನು ಈ ಹೊಚ್ಚ ಹೊಸ ಕ್ರೆಡಿಟ್ ಕಾರ್ಡ್ ಭಾರತೀಯ ವೃತ್ತಿಪರರು ಹಾಗೂ ಉದ್ಯಮಶೀಲ ಜನರಿಗೆಂದು ವಿಶೇಷವಾಗಿ ಹೊರತರಲಾಗಿದೆ.
ಈ ಕಾರ್ಡ್ ಅಡಿ ಅನೇಕ ರೀತಿಯ ವಿಮೆಗಳ ಸೌಲಭ್ಯ ಕೊಡಲಾಗಿದೆ. ಪ್ರಯಾಣದ ವೇಳೆ ಬ್ಯಾಗೇಜ್ ಕಳುವಾದಲ್ಲಿ ಒಂದು ಲಕ್ಷ ರೂ.ಗಳಷ್ಟು, ಪ್ರಯಾಣ ದಾಖಲೆಗಳು ಕಳುವಾದಲ್ಲಿ 75 ಸಾವಿರ ರೂ.ಗಳಷ್ಟು ವಿಮೆ ಲಭ್ಯವಿದೆ. ಜೊತೆಗೆ ಯಾವುದೇ ಅಂತಾರಾಷ್ಟ್ರೀಯ ಅಥವಾ ದೇಸೀ ವಿಮಾನ ನಿಲ್ದಾಣಗಳ ಲೌಂಜ್ ಪ್ರವೇಶಿಸಲು ಈ ಕಾರ್ಡ್ ಮೂಲಕ ಕಾಂಪ್ಲಿಮೆಂಟರಿಯಾಗಿ ಅವಕಾಶ ಕೊಡಲಾಗಿದೆ.
ವಿಮಾನ ಅಪಘಾತದ ಸಾಧ್ಯತೆ ಮೇಲೆ ವೈಯಕ್ತಿಕ ಮಟ್ಟದಲ್ಲಿ 2.5 ಕೋಟಿ ರೂ.ಗಳವರೆಗೂ ವಿಮೆ ಸೌಲಭ್ಯವನ್ನೂ ಈ ಕಾರ್ಡ್ ಒದಗಿಸುತ್ತದೆ.
ವಾರ್ಷಿಕ ಹತ್ತು ಲಕ್ಷ ರೂ.ಗಳಿಗಿಂತ ಹೆಚ್ಚು ಹಣವನ್ನು ವ್ಯಯ ಮಾಡಿದಲ್ಲಿ ಕಾರ್ಡ್ ಮೇಲಿನ ವಾರ್ಷಿಕ ಶುಲ್ಕ ಮನ್ನಾ ಮಾಡಲಾಗುವುದು. ಜೊತೆಗೆ ತಡವಾದ ಪಾವತಿ ಮೇಲೆ ವಿಧಿಸುವ ವೆಚ್ಚದ ಮೇಲೆ ಜೀವನ ಪರ್ಯಂತ ಅವಧಿಗೆ ಮನ್ನಾ ಮಾಡಲಾಗುವುದು.
ಇವುಗಳ ಜೊತೆಗೆ ಇನ್ನಷ್ಟು ಆಕರ್ಷಕ ಆಫರ್‌ಗಳನ್ನು ಕಾರ್ಡ್ ಜೊತೆಗೆ ನೀಡಲಾಗಿದೆ. ಆಸಕ್ತರು ಇಂಡಸ್‌ಇಂಡ್ ಬ್ಯಾಂಕ್‌ನ ಜಾಲತಾಣಕ್ಕೆ ಭೇಟಿ ಕೊಟ್ಟು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬಹುದು.