ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗವು(CCI) ವಿಸ್ತಾರಾ ಟಾಟಾ SIA ಏರ್ಲೈನ್ಸ್ ಮತ್ತು ಏರ್ ಇಂಡಿಯಾದ ವಿಲೀನಕ್ಕೆ ಅನುಮೋದನೆ ನೀಡಿದೆ.
ಇದಲ್ಲದೆ, ಇದು ಏರ್ ಇಂಡಿಯಾದಲ್ಲಿ 25.1% ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ವಿಸ್ತಾರಾದಲ್ಲಿ ಟಾಟಾ ಗ್ರೂಪ್ನ ಪಾಲುದಾರ ಸಿಂಗಾಪುರ್ ಏರ್ ಲೈನ್ಸ್ ಗೆ ಹಸಿರು ನಿಶಾನೆ ತೋರಿಸಿದೆ.
ಟಾಟಾ ಸನ್ಸ್ ಮತ್ತು ಸಿಂಗಾಪುರ್ ಏರ್ಲೈನ್ಸ್ ನಡುವಿನ 51:49 ಜಂಟಿ ಉದ್ಯಮವಾಗಿ 2013 ರಲ್ಲಿ ಸ್ಥಾಪಿಸಲಾದ ಪೂರ್ಣ-ಸೇವಾ ವಿಮಾನಯಾನ ವಿಸ್ತಾರಾ, ಮಧ್ಯಪ್ರಾಚ್ಯ, ಏಷ್ಯಾ ಮತ್ತು ಯುರೋಪ್ನಾದ್ಯಂತ ಅಂತರರಾಷ್ಟ್ರೀಯವಾಗಿ ಕಾರ್ಯನಿರ್ವಹಿಸುತ್ತದೆ.
ವಿಸ್ತಾರಾ ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳುವ ಸಂದರ್ಭದಲ್ಲಿ, ಸಿಂಗಾಪುರ್ ಏರ್ಲೈನ್ಸ್ ಏರ್ ಇಂಡಿಯಾಕ್ಕೆ 2,059 ಕೋಟಿ ರೂ. ನೀಡಲಿದ್ದು, ಆ ಮೂಲಕ 25.1% ಪಾಲನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ.