ಮುಂಬೈ: ಕೊರೋನಾ ಲಾಕ್ಡೌನ್ ಮೊದಲಾದ ಕಾರಣದಿಂದ ಉದ್ಯೋಗಿಗಳ ವೇತನಕ್ಕೆ ಬಹುತೇಕ ಕಾರ್ಪೊರೇಟ್ ಕಂಪನಿಗಳು ಕತ್ತರಿ ಹಾಕಿದ್ದವು.
ದೀಪಾವಳಿ ಹಬ್ಬದ ಹೊತ್ತಲ್ಲೇ ಉದ್ಯೋಗಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಬಹುತೇಕ ಕಾರ್ಪೊರೇಟ್ ಕಂಪನಿಗಳು ಉದ್ಯೋಗಿಗಳಿಗೆ ಪೂರ್ಣ ವೇತನ ನೀಡಲು ಆರಂಭಿಸಿದ್ದು, ಇದರೊಂದಿಗೆ ಬೋನಸ್ ಕೂಡ ವಿತರಿಸಿವೆ. ಕಡಿತ ಮಾಡಿದ್ದ ವೇತನವನ್ನೂ ವಾಪಸ್ ನೀಡತೊಡಗಿವೆ.
ಅನೇಕ ಕಂಪನಿಗಳಲ್ಲಿ ವೇತನ ಪರಿಷ್ಕರಣೆ ಮಾಡಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್, ವೋಲ್ಟಾಸ್ ಮೊದಲಾದ ಕಂಪನಿಗಳು ದೀಪಾವಳಿಗೆ ಸಿಬ್ಬಂದಿಗೆ ಕೊಡುಗೆ ನೀಡಿವೆ. ಅನೇಕ ಕಂಪನಿಗಳು ಕಂತುಗಳಲ್ಲಿ ವೇರಿಯೇಬಲ್ ವೇತನ ವಿತರಿಸಲು ಆರಂಭಿಸಿವೆ. ಜೀ, ಸ್ಟಾರ್, ಕೋಟಕ್ ಮಹೀಂದ್ರಾ ಬ್ಯಾಂಕ್ ವೇತನ ಕಡಿತ ಹಿಂಪಡೆದುಕೊಂಡಿದ್ದು, ಅನೇಕ ಕಂಪನಿಗಳು ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿದ್ದ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಪೂರ್ಣ ವೇತನ ನೀಡತೊಡಗಿವೆ. ಹಬ್ಬಕ್ಕೆ ಬೋನಸ್ ಜೊತೆಗೆ ಕಡಿತ ಮಾಡಿದ್ದ ವೇತನ ವಾಪಸ್ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.