ಇತ್ತೀಚಿನ ದಿನಗಳಲ್ಲಿ ಜನರು ಹೂಡಿಕೆಗೆ ಹೆಚ್ಚು ಮಹತ್ವ ನೀಡ್ತಿದ್ದಾರೆ. ಚಿನ್ನ ಸಾಂಪ್ರದಾಯಿಕ ಹೂಡಿಕೆಯಾಗಿದೆ. ಜನರು ಚಿನ್ನದ ಜೊತೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದ್ರೆ ಮುಂದಿನ ದಿನಗಳಲ್ಲಿ ಚಿನ್ನ,ಮ್ಯೂಚುವಲ್ ಫಂಡ್‌ಗಳಿಗಿಂತ ಬೆಳ್ಳಿ ಹೆಚ್ಚು ಆದಾಯ ನೀಡಲಿದೆ ಎಂದು ತಜ್ಞರು ಹೇಳ್ತಿದ್ದಾರೆ. ಇದು ಬೆಳ್ಳಿ ಮೇಲೆ ಹೂಡಿಕೆ ಮಾಡಲು ಒಳ್ಳೆಯ ಸಮಯವಾಗಿದೆ. ಮುಂದಿನ ದಿನಗಳಲ್ಲಿ ಬೆಳ್ಳಿ ನಿಮ್ಮನ್ನು ಶ್ರೀಮಂತಗೊಳಿಸಲಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ತಜ್ಞರ ಪ್ರಕಾರ, ಈ ವರ್ಷ ಕೆ.ಜಿ ಬೆಳ್ಳಿ 80,000 ರೂಪಾಯಿವರೆಗೆ ತಲುಪುವ ಸಾಧ್ಯತೆಯಿದೆ. 2024ರ ವೇಳೆಗೆ 1.50 ಲಕ್ಷ ರೂಪಾಯಿಯಾಗುವ ಸಾಧ್ಯತೆಯಿದೆ. ಸದ್ಯ ಕೆ.ಜಿ ಬೆಳ್ಳಿ ಬೆಲೆ 61,000 ರ ಆಸುಪಾಸಿನಲ್ಲಿದೆ. ಬೇಡಿಕೆ ಹೆಚ್ಚುತ್ತಿರುವಷ್ಟು ವೇಗವಾಗಿ ಬೆಳ್ಳಿ ಗಣಿಗಾರಿಕೆ ಹೆಚ್ಚಾಗುತ್ತಿಲ್ಲ. 2018-20ರವರೆಗೆ ಬೆಳ್ಳಿ ಗಣಿಗಾರಿಕೆ ನಿರಂತರವಾಗಿ ಕುಸಿಯುತ್ತಿದೆ. ಆಟೋಮೊಬೈಲ್, ಸೋಲಾರ್ ಮತ್ತು ಎಲೆಕ್ಟ್ರಿಕ್ ವಾಹನ ಉದ್ಯಮಗಳಿಂದ ಬೆಳ್ಳಿಗೆ ಹೆಚ್ಚುವರಿ ಬೇಡಿಕೆ ಬಂದಿದೆ. ಹಾಗಾಗಿ ಬೆಳ್ಳಿ ಬೆಲೆ ಏರಲಿದೆ ಎಂದು ತಜ್ಞರು ಹೇಳಿದ್ದಾರೆ. ಅಂಕಿಅಂಶಗಳ ಪ್ರಕಾರ, 2022-24ರಲ್ಲಿ ಬೆಳ್ಳಿಯ ಬೇಡಿಕೆಯು ಶೇಕಡಾ 25-30 ರಷ್ಟು ಹೆಚ್ಚಾಗಲಿದೆ. ಇದಕ್ಕೆ ವ್ಯತಿರಿಕ್ತವಾಗಿ, ಗಣಿಗಾರಿಕೆಯು ಕೇವಲ ಶೇಕಡಾ 8 ರಷ್ಟು ಮಾತ್ರ ಬೆಳೆಯಲಿದೆ ಎನ್ನಲಾಗಿದೆ.