alex Certify BIG NEWS: ಪ್ರವಾಸಿ ಮಾರ್ಗಗಳಲ್ಲಿ ಸಂಚರಿಸಲಿದೆ ಐಷಾರಾಮಿ ರೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪ್ರವಾಸಿ ಮಾರ್ಗಗಳಲ್ಲಿ ಸಂಚರಿಸಲಿದೆ ಐಷಾರಾಮಿ ರೈಲು

'Comfort and Cutting-edge Technology': PM Modi Hails New Vistadome Tourist Coaches

ಭಾರತೀಯ ರೈಲ್ವೇಯ ಲಕ್ಸೂರಿ ರೈಲುಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ವಿಸ್ತಾಡೋಮ್ ಪ್ರವಾಸೀ ಕೋಚ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದಾರೆ.

ಚೆನ್ನೈನ ಇಂಟಿಗ್ರಲ್ ಕೋಚ್‌ ಫ್ಯಾಕ್ಟರಿ ಅಭಿವೃದ್ಧಿಪಡಿಸಿರುವ ಈ ಕೋಚ್‌ಗಳು 180 ಕಿಮೀ/ಗಂಟೆ ವೇಗದಲ್ಲಿ ತಮ್ಮ ಪ್ರಯೋಗಾರ್ಥ ಸಂಚಾರವನ್ನು ಯಶಸ್ವಿಯಾಗಿ ಮಾಡಿವೆ. ರೂಫ್‌ಟಾಪ್ ಗ್ಲಾಸ್‌ಗಳು, ರೊಟೇಟಿಂಗ್ ಸೀಟುಗಳು, ವೈ-ಫೈ ಸೌಲಭ್ಯಗಳು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಈ ಕೋಚ್‌ಗಳು ಒಳಗೊಳ್ಳಲಿವೆ.

ಮುಂದಿನ ದಿನಗಳಲ್ಲಿ ಈ ಕೋಚ್‌ಗಳನ್ನು ನೀಲಗಿರಿ ರೈಲ್ವೇ, ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ, ಕಾಲ್ಕಾ-ಶಿಮ್ಲಾ ರೈಲ್ವೇ, ಕಾಂಗ್ರಾ ಕಣಿವೆ ರೈಲ್ವೇ, ಮಥೆರಾನ್ ಗುಡ್ಡಗಾಡು ರೈಲ್ವೇ, ದಾದರ್‌-ಮಡಗಾಂವ್‌ ಮಾರ್ಗ, ಅರಾಕು ಕಣಿವೆ ಹಾಗೂ ಕಾಶ್ಮೀರ ಕಣಿವೆಗಳಲ್ಲಿ ಓಡಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...