ತುಮಕೂರು: ಜನವರಿ 20 ರಿಂದ ನಡೆಯಬೇಕಿದ್ದ ಕೊಬ್ಬರಿ ಖರೀದಿ, ನೋಂದಣಿ ಪ್ರಕ್ರಿಯೆಯನ್ನು ಫೆಬ್ರವರಿ 1ಕ್ಕೆ ಮುಂದೂಡಲಾಗಿದೆ.
ಜನವರಿ 20ರಿಂದ ನಾಫೆಡ್ ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸುವ ಪ್ರಕ್ರಿಯೆ ಆರಂಭವಾಗಬೇಕಿತ್ತು. ಸಹಕಾರ ಇಲಾಖೆ ಶನಿವಾರ ಹೊಸದಾಗಿ ಆದೇಶ ಹೊರಡಿಸಿ ಫೆಬ್ರವರಿ 1ರಿಂದ ಖರೀದಿ ಆರಂಭಿಸುವುದಾಗಿ ಹೇಳಿದೆ.
ಜನವರಿ 20 ರಿಂದ ನಾಫೆಡ್ ಕೇಂದ್ರಗಳ ಮೂಲಕ ತುಮಕೂರು ಜಿಲ್ಲೆಯ 21 ಕಡೆ ಕೊಬ್ಬರಿ ಖರೀದಿಸಲು ತೀರ್ಮಾನಿಸಲಾಗಿತ್ತು. ಆದರೆ, ಖರೀದಿ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ. ಫೆಬ್ರವರಿ 1ರಿಂದ ಖರೀದಿ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಲಾಗಿದೆ.