ತುಮಕೂರು: ಕೊಬ್ಬರಿಗೆ ದಾಖಲೆಯ ಬೆಲೆ ಬಂದಿದೆ. ತುಮಕೂರು ಜಿಲ್ಲೆ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವುದು ಬೆಳೆಗಾರರಿಗೆ ಖುಷಿ ತಂದಿದೆ.
ಇ – ಹರಾಜಿನಲ್ಲಿ ಒಂದು ಕ್ವಿಂಟಾಲ್ ಗೆ ಗರಿಷ್ಠ 18 ಸಾವಿರ ರೂಪಾಯಿ ನಿಗದಿಯಾಗಿದ್ದು, ಬೆಳೆಗಾರರಲ್ಲಿ ಸಂತಸ ತಂದಿದೆ. ಲಾಕ್ ಡೌನ್ ಜಾರಿ ಮಾಡಿರುವ ಪರಿಣಾಮ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾರುಕಟ್ಟೆಯಲ್ಲಿ ಖರೀದಿಗೆ ಅವಕಾಶವಿದ್ದು, ಮಧ್ಯಾಹ್ನದವರೆಗೆ ಖರೀದಿಗೆ ಅವಕಾಶ ನೀಡಬೇಕೆಂದು ರೈತರಿಂದ ಒತ್ತಾಯ ಕೇಳಿಬಂದಿದೆ.