
ತುಮಕೂರು: ಅನೇಕ ದಿನಗಳಿಂದ ಕೊಬ್ಬರಿ ಬೆಲೆ ಇಳಿಕೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದ ಬೆಳೆಗಾರರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಕೊಬ್ಬರಿ ಬೆಲೆ ಏರಿಕೆಯ ಹಾದಿಯಲ್ಲಿದ್ದು, ಕ್ವಿಂಟಲ್ ಗೆ 14 ರೂಪಾಯಿ ಗಡಿ ದಾಟಿದೆ. ಅರಸೀಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಲ್ ಕೊಬ್ಬರಿಗೆ 14,070 ರೂಪಾಯಿವರೆಗೂ ಮಾರಾಟವಾಗಿದೆ.
ಕೊರೋನಾ ಲಾಕ್ಡೌನ್ ಜಾರಿಯಾಗುವ ಮೊದಲು ಕೊಬ್ಬರಿಗೆ 10,500 ರೂಪಾಯಿ ದರ ಇತ್ತು. ನಂತರದಲ್ಲಿ ಕೊಬ್ಬರಿ ಮಾರಾಟ ಆರಂಭವಾಗಿ ಕ್ವಿಂಟಲ್ ಗೆ 11,200 ರೂಪಾಯಿವರೆಗೂ ದರ ಇತ್ತು. ಬಳಿಕ ದರ ಇಳಿಕೆಯಾಗಿ 8,800 ರೂಪಾಯಿಗೆ ಇಳಿದಿತ್ತು.
ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ ಕೊಬ್ಬರಿ ಖರೀದಿ ಕೇಂದ್ರ ನಿಗದಿ ಮಾಡಿದ ಬೆಲೆಗಿಂತ ಕಡಿಮೆ ದರ ಇತ್ತು. ಖರೀದಿ ಕೇಂದ್ರ ಆರಂಭವಾದ ನಂತರ ಬೆಲೆ ಏರಿಕೆಯಾಗಡಗಿದ್ದು, ಕ್ವಿಂಟಲ್ ಕೊಬ್ಬರಿಗೆ 14 ಸಾವಿರ ರೂ ದಾಟಿದೆ. ಇದೇ ಬೆಲೆ ಸಿಕ್ಕರೆ ರೈತರಿಗೆ ಅನುಕೂಲವಾಗುತ್ತದೆ. ಬೆಲೆ ಕುಸಿತ ತಡೆಯಬೇಕು. ಮೂಲ ಬೆಲೆಯನ್ನು 15 ಸಾವಿರ ರೂ.ಗೆ ನಿಗದಿಮಾಡಬೇಕೆಂದು ಹೇಳಲಾಗಿದೆ.