ನವದೆಹಲಿ: ಕೊಬ್ಬರಿ ಮೇಲಿನ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದ್ದು, ಈ ಮೂಲಕ ತೆಂಗು ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಕನಿಷ್ಠ ಬೆಂಬಲ ಬೆಲೆಯನ್ನು 375 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಬಲ ಬೆಲೆ ಹೆಚ್ಚಳದಿಂದಾಗಿ ಪ್ರತಿ ಕ್ವಿಂಟಲ್ ಕೊಬ್ಬರಿ ದರ 10,335 ರೂಪಾಯಿಗೆ ಏರಿಕೆಯಾಗಿದೆ. 2020 ನೇ ಸಾಲಿನಲ್ಲಿ ಕೊಬ್ಬರಿ ಬೆಲೆ 9960 ರೂಪಾಯಿ ಇತ್ತು. ಅದನ್ನು 375 ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿದೆ. ದುಂಡು ಕೊಬ್ಬರಿ ಮೇಲಿನ ಎಂ.ಎಸ್.ಪಿ.ಯನ್ನು 300 ರೂ., ತುಂಡರಿಸಿದ ಕೊಬ್ಬರಿ ಮೇಲಿನ ಎಂ.ಎಸ್.ಪಿ.ಯನ್ನು 375 ರೂ. ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ 12 ರಾಜ್ಯಗಳ ತೆಂಗು ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.