ಬೆಂಗಳೂರು: ರಾಜ್ಯದ ಎಲ್ಲಾ ಮಾದರಿಯ ಸಹಕಾರ ಸಂಘಗಳ ಚುನಾವಣೆಯನ್ನು ಡಿಸೆಂಬರ್ 31ರವರೆಗೆ ಮುಂದೂಡಲು ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಅಧಿಕೃತ ಆದೇಶ ಪ್ರಕಟವಾಗಿದೆ.
ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳ ಚುನಾವಣೆಯನ್ನು ಡಿಸೆಂಬರ್ 2020ರ ವರೆಗೆ ಮುಂದೂಡುವ ಬಗ್ಗೆ ಆಡಳಿತ ಮಂಡಳಿಗಳ ಅವಧಿ ಮುಕ್ತಾಯಗೊಂಡಿರುವ ಮತ್ತು ಮುಕ್ತಾಯಗೊಳ್ಳುವ ಸಹಕಾರ ಸಂಸ್ಥೆಗಳಿಗೆ ಆಡಳಿತ ಅಧಿಕಾರಿಗಳನ್ನು ನೇಮಿಸುವ ಬಗ್ಗೆ ಆದೇಶ ಹೊರಡಿಸಿಲಾಗಿದೆ.
ಎಲ್ಲ ಸಹಕಾರ ಸಂಘಗಳ, ಸಹಕಾರ ಬ್ಯಾಂಕುಗಳ ಚುನಾವಣೆಗಳನ್ನು ಮುಂದೂಡಲಾಗಿದ್ದು, ಈಗಾಗಲೇ ಚುನಾವಣಾ ವೇಳಾಪಟ್ಟಿ ಹೊರಡಿಸಿ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿದ್ದರೆ ಅದನ್ನು ಕೂಡ ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಲಾಗಿದೆ.
ಅವಧಿ ಮುಕ್ತಾಯಗೊಂಡ ಮತ್ತು ಮುಕ್ತಾಯಗೊಳ್ಳುವ ಸಹಕಾರಿ ಸಂಸ್ಥೆಗಳಿಗೆ ಸಹಕಾರ ಸಂಘಗಳ ಕಾಯ್ದೆ ಅನ್ವಯ ಆಡಳಿತ ಅಧಿಕಾರಿಗಳನ್ನು ನೇಮಿಸುವ ನಿಬಂಧಕರು ಕ್ರಮಕೈಗೊಳ್ಳಲು ಸೂಚಿಸಲಾಗಿದೆ.