ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 8 ನೇ ಬಜೆಟ್ ಮಂಡನೆಗೆ ಸಿದ್ಧತೆ ಪೂರ್ಣಗೊಂಡಿದೆ. ನಾಳೆ ಮಧ್ಯಾಹ್ನ 12.05 ಕ್ಕೆ ಹಣಕಾಸು ಖಾತೆ ಹೊಂದಿರುವ ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ.
8ನೇ ಬಾರಿಗೆ ಅವರು ಬಜೆಟ್ ಮಂಡಿಸಲು ಅವರು ತಯಾರಿ ಮಾಡಿಕೊಂಡಿದ್ದಾರೆ. ಹೊಸ ತೆರಿಗೆ ಇಲ್ಲದೆ ಹೆಚ್ಚಿನ ಹೊಸ ಯೋಜನೆ ಘೋಷಣೆ ಮಾಡದೆ ಬಜೆಟ್ ಮಂಡಿಸುವ ಸಾಧ್ಯತೆ ಇದೆ.
2021 – 22 ನೇ ಸಾಲಿನ ಬಜೆಟ್ ಕಳೆದ ಬಾರಿಗಿಂತ ಹೆಚ್ಚಿನ ಗಾತ್ರ ಹೊಂದಿದೆ. ಕೊರೋನಾ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಬಜೆಟ್ ಗಾತ್ರ ಕಡಿಮೆಯಾಗಿಲ್ಲ. ಬಜೆಟ್ ಮಂಡನೆಯ ನಂತರ ಸಿಎಂ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.