ರಾಂಚಿ: ಗಣರಾಜ್ಯೋತ್ಸವದ ಕೊಡುಗೆಯಾಗಿ ಬಿಪಿಎಲ್ ಕುಟುಂಬದವರಿಗೆ ಪ್ರತಿ ತಿಂಗಳಿಗೆ 10 ಲೀಟರ್ ಪೆಟ್ರೋಲ್ ಖರೀದಿಗೆ 250 ರೂಪಾಯಿ ಸಹಾಯಧನ ನೀಡಲಾಗುವುದು ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ.
ಜಾರ್ಖಂಡ್ ನ ಬಿಪಿಎಲ್ ಕುಟುಂಬದವರಿಗೆ ಪೆಟ್ರೋಲ್ ಸಬ್ಸಿಡಿ ಯೋಜನೆ ಬಗ್ಗೆ ಸಿಎಂ ಸೊರೆನ್ ಘೋಷಣೆ ಮಾಡಿದ್ದಾರೆ. 73 ನೇ ಗಣರಾಜ್ಯೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೊಡುಗೆ ನೀಡಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಸಪೋರ್ಟ್ಸ್ ಆಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಗಣರಾಜ್ಯೋತ್ಸವದಂದು ಡುಮ್ಕಾದಲ್ಲಿ ಪೆಟ್ರೋಲ್ ಸಬ್ಸಿಡಿ ಯೋಜನೆಗೆ ಸಿಎಂ ಸೊರೆನ್ ಚಾಲನೆ ನೀಡಿದರು, ಇದರ ಅಡಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 25 ರೂ. ಸಬ್ಸಿಡಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.