ಸೋಂಕಿತರಿಗೆ ಚಿಕಿತ್ಸೆ ನೀಡಲೆಂದೇ ರೈಲ್ವೆ ಬೋಗಿಗಳನ್ನು ಕೊರೋನಾ ಕಾಳಜಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ.
ಇದಕ್ಕಾಗಿ ಪ್ರತಿ ಬೋಗಿಗೆ 30 ಸಾವಿರ ರೂ.ಗಳಂತೆ ಖರ್ಚು ಮಾಡಿರುವ ನೈಋತ್ಯ ರೈಲ್ವೆ, ಏಪ್ರಿಲ್ ನಿಂದ ಈವರೆಗೆ ಒಟ್ಟು 320 ಬೋಗಿಗಳನ್ನು ಕಾಳಜಿ ಕೇಂದ್ರಗಳಾಗಿ ಬದಲಿಸಿದೆ.
ಅಂದರೆ, ಬರೋಬ್ಬರಿ 96 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಇತರೆ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಸೋಂಕು ನಿವಾರಕ ಸಿಂಪಡಿಸಿ, ಶುಚಿತ್ವ ಕಾಪಾಡಲಾಗುತ್ತಿದೆ.
ಆರೋಗ್ಯ ಹಾಗೂ ರೈಲ್ವೆ ಇಲಾಖೆ ಸೇರಿ ಬೋಗಿಗಳನ್ನ ಪರಿವರ್ತನೆ ಮಾಡಿದ್ದು, ವಿದ್ಯುತ್, ನೀರಿನ ಸಂಪರ್ಕ ಹಾಗೂ ಅಗತ್ಯ ಸೌಲಭ್ಯಗಳನ್ನೆಲ್ಲ ಒದಗಿಸಿದೆ.
ಆದರೆ, ಇದುವರೆಗೆ ಯಾವೊಬ್ಬ ರೋಗಿಗೂ ಚಿಕಿತ್ಸೆ ಕೊಟ್ಟಿಲ್ಲ. ಸರ್ಕಾರವೂ ಇದರ ಬಳಕೆಯತ್ತ ಗಮನ ಹರಿಸುತ್ತಿಲ್ಲ. ಹಾಸಿಗೆ ಕೊರತೆ ಇದ್ದರೂ ಸರ್ಕಾರ ಏಕೆ ನಿರ್ಲಕ್ಷ್ಯ ವಹಿಸಿದೆ ಎಂಬುದು ಗೊತ್ತಾಗುತ್ತಿಲ್ಲ. ಸರ್ಕಾರದ ಪ್ರತಿಕ್ರಿಯೆಗೆ ಕಾದು ಸುಸ್ತಾದ ರೈಲ್ವೆ ಇಲಾಖೆ, 320 ರ ಪೈಕಿ 160 ಬೋಗಿಗಳನ್ನು ಶ್ರಮಿಕ್ ರೈಲಿಗೆ ಅಳವಡಿಸಿ ಬಳಸಿದೆ.