ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ಪ್ರಯಾಣದ ನಿಯಮದಲ್ಲಿ ಬದಲಾವಣೆ ಮಾಡಿದೆ. ವಿಮಾನದಲ್ಲಿ ಪ್ರಯಾಣಿಸಲು ಭರ್ತಿ ಮಾಡಬೇಕಾದ ಸ್ವಯಂ ಘೋಷಣೆ ಫಾರ್ಮ್ ಅನ್ನು ನವೀಕರಿಸಿದೆ. ಕಳೆದ 21 ದಿನಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿಲ್ಲದ ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಬೇಕೆಂದು ಸಚಿವಾಲಯವು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ತಿಳಿಸಿದೆ.
21 ದಿನಗಳ ಈ ಸಮಯ ಮಿತಿಯು ಪ್ರಯಾಣದ ದಿನಾಂಕಕ್ಕಿಂತ ಮೊದಲಿನ ದಿನಕ್ಕೆ ಅನ್ವಯವಾಗುತ್ತದೆ. ಪಿಟಿಐ ತನ್ನ ವರದಿಯೊಂದರಲ್ಲಿ ಈ ಬಗ್ಗೆ ಹೇಳಿದೆ. ಮೇ 21 ರಂದು ವಿಮಾನಯಾನ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, ಕಳೆದ 2 ತಿಂಗಳಲ್ಲಿ ಕೋವಿಡ್ -19 ಧನಾತ್ಮಕವಾಗಿ ಕಂಡುಬರದ ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿತ್ತು.
ಕೊರೊನಾ ವೈರಸ್ ನಿಂದ ಅನೇಕರು ಚೇತರಿಸಿಕೊಂಡಿದ್ದಾರೆ. ಆದ್ರೆ ಪ್ರಯಾಣಿಕರಿಗೆ ಇದ್ರಿಂದ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ.