ನವದೆಹಲಿ: 2023ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ನ್ಯೂಯಾರ್ಕ್ ಮೂಲದ ಸಿಟಿ ಗ್ರೂಪ್ ಆದಾಯದಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮುಂದಿನ ಎರಡು ವರ್ಷಗಳಲ್ಲಿ 20,000 ಉದ್ಯೋಗಿಗಳನ್ನು ವಜಾ ಮಾಡಲು ತೀರ್ಮಾನಿಸಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ 1.8 ಶತಕೋಟಿ ಡಾಲರ್ ನಷ್ಟ ದಾಖಲಿಸಿದ ಹಿನ್ನೆಲೆಯಲ್ಲಿ ಸಿಟಿ ಗ್ರೂಪ್ ಸಿಇಒ ಜೇನ್ ಫ್ರೇಸರ್ ನೇತೃತ್ವದಲ್ಲಿ ಸಂಸ್ಥೆ ಈ ತೀರ್ಮಾನ ಕೈಗೊಂಡಿದೆ. 20 ಸಾವಿರ ಉದ್ಯೋಗಿಗಳ ವಜಾ ಮಾಡಿರುವುದರಿಂದ ಸಂಸ್ಥೆಗೆ 2.5 ಶತ ಕೋಟಿ ಡಾಲರ್ ಉಳಿತಾಯವಾಗಲಿದೆ. ಮುಂದಿನ ದಿನಗಳಲ್ಲಿ ಆದಾಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯನ್ನು ಆಡಳಿತ ಮಂಡಳಿ ಹೊಂದಿದೆ.
ಆದರೆ, ದೂರ ದೃಷ್ಟಿ ಕೇಂದ್ರಿತ ಯೋಜನೆಗಳನ್ನು ರೂಪಿಸದೆ ವೆಚ್ಚ ಕಡಿಮೆ ಮಾಡಲು ಉದ್ಯೋಗ ಕಡಿತಕ್ಕೆ ಮುಂದಾದ ಸಂಸ್ಥೆಯ ಕ್ರಮಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ.