ಅನ್ಲಾಕ್ ಶುರುವಾದ್ಮೇಲೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಭಯ ಹುಟ್ಟಿಸುತ್ತಿದೆ. ಈ ಮಧ್ಯೆ ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಮಧ್ಯೆ ಭಾರತೀಯ ಕಂಪನಿ ಅಮೆರಿಕಾ ಲಸಿಕೆಯೊಂದನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಔಷಧಿ ಹೆಸರಿ remdesivir. ಭಾರತೀಯ ದೈತ್ಯ ಸಿಪ್ಲಾ, ಇದರ ಹೊಸ ಆವೃತ್ತಿಯನ್ನು ಸಿದ್ಧಪಡಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇವು ಲಭ್ಯವಾಗಿವೆ. ಕಂಪನಿಯು ಮೊದಲ ಹಂತದಲ್ಲಿ 80,000 ಔಷಧಿಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. 100 ಮಿಗ್ರಾಂ ಬಾಟಲಿ ಬೆಲೆ 4,000 ರೂಪಾಯಿ ಎಂದು ಕಂಪನಿ ಹೇಳಿದೆ.
ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ remdesivir ಔಷಧಿ ದೀರ್ಘಕಾಲದಿಂದ ಚರ್ಚೆಯಲ್ಲಿದೆ. ಯುನೈಟೆಡ್ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಅನುಮತಿಯೊಂದಿಗೆ, ಯುಎಸ್ ನಿಯಂತ್ರಕ, ಕೊರೊನಾ ರೋಗಿಗಳ ಮೇಲೆ ಅಗತ್ಯವಿದ್ದಾಗ ಅಥವಾ ತುರ್ತು ಪರಿಸ್ಥಿತಿಯಲ್ಲಿ ಬಳಸುತ್ತಿದೆ.