ಕ್ರಿಸ್ ಮಸ್ ಹಬ್ಬ ಅಂದ ಕೂಡಲೇ ನೆನಪಾಗೋದು ಕೇಕ್ಗಳು, ಅಲಂಕಾರಿಕ ವಸ್ತುಗಳು ಹಾಗೂ ಬಹುಮುಖ್ಯವಾಗಿ ಪ್ರೀತಿ ಪಾತ್ರರ ಉಡುಗೊರೆಗಳು.
ಪ್ರತಿ ವರ್ಷ ಪ್ರೀತಿ ಪಾತ್ರರನ್ನ ಭೇಟಿಯಾಗಿ ಅವರಿಗೆ ಉಡುಗೊರೆ ನೀಡುವ ಸಂಪ್ರದಾಯ ಕ್ರಿಶ್ಚಿಯನ್ ಸಮುದಾಯದಲ್ಲಿದೆ.
ಆದರೆ ಈ ಬಾರಿ ಕೊರೊನಾ ಕಾರಣದಿಂದ ಯಾರನ್ನೂ ಭೇಟಿ ಮಾಡೋಕೆ ಸಾಧ್ಯವಾಗ್ತಿಲ್ಲ ಅನ್ನೋದು ಒಂದಡೆಯಾದರೆ ಆರ್ಥಿಕ ಸಂಕಷ್ಟ ಕೂಡ ಉಡುಗೊರೆ ಖರೀದಿಯಲ್ಲಿ ಹಿಂದೆ ಮುಂದೆ ನೋಡುವಂತೆ ಮಾಡಿದೆ.
ಹೀಗಾಗಿ ನಿಮಗಾಗಿ ಇಲ್ಲೊಂದಿಷ್ಟು ಪಾಕೆಟ್ ಸ್ನೇಹಿ ಉಡುಗೊರೆಗಳ ಪಟ್ಟಿಯನ್ನ ನಾವು ತಯಾರಿಸಿದ್ದೇವೆ.
1. ಅಲಂಕಾರಿ ಕ್ಯಾಂಡಲ್ಗಳು : ಅಲಂಕಾರಿಕ ಕ್ಯಾಂಡಲ್ಗಳನ್ನ ನೀವು ಮನೆಯಲ್ಲಿ ಇಡಲಿಲ್ಲ ಅಂದರೆ ಕಳೆ ಬರೋಕೆ ಸಾಧ್ಯಾನೇ ಇಲ್ಲ. ಹೀಗಾಗಿ ಕಡಿಮೆ ದರದಲ್ಲಿ ಸಿಗುವ ಈ ಕ್ಯಾಂಡಲ್ಗಳನ್ನೇ ನೀವು ಗಿಫ್ಟ್ ರೂಪದಲ್ಲಿ ನೀಡಬಹುದು.
2. ಸುಂದರವಾದ ಡೈರಿಗಳು : ಇದಕ್ಕಿಂತ ಒಳ್ಳೆಯ ಬಜೆಟ್ ಫ್ರೆಂಡ್ಲಿ ಗಿಫ್ಟ್ ನಿಮಗೆ ಇನ್ನೊಂದು ಸಿಗಲಿಕ್ಕಿಲ್ಲ. ಚಂದನೆಯ ಮುಖಪುಟವುಳ್ಳ ಡೈರಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಜೊತೆಯಲ್ಲಿ ನಿಮ್ಮ ಪ್ರೀತಿ ಪಾತ್ರರ ಫೋಟೋಗಳನ್ನೇ ಹಾಕಿ ತಯಾರು ಮಾಡಬಹುದಾದ ಕಸ್ಟಮೈಸ್ಡ್ ಡೈರಿಗಳೂ ಈಗ ಲಭ್ಯವಿದೆ.
3. ಕ್ರಿಸ್ಮಸ್ ಕಾರ್ಡ್ಗಳು: ಕ್ರಿಸ್ಮಸ್ ಕಾರ್ಡ್ಗಳು ಬಹಳ ಸಮಯದಿಂದ ಚಾಲ್ತಿಯಲ್ಲಿರುವ ಎವರ್ಗ್ರೀನ್ ಉಡುಗೊರೆ. ಇದನ್ನ ನೀವು ಶಾಪ್ನಲ್ಲಿ ಇಲ್ಲವೇ ಆನ್ಲೈನ್ ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದು. ಇದೂ ಬೇಡ ಅಂದರೆ ನಿಮ್ಮ ಕೈಯಾರೇ ಕಾರ್ಡ್ಗಳನ್ನ ತಯಾರು ಮಾಡಿ ಪ್ರೀತಿಪಾತ್ರರಿಗೆ ನೀಡಬಹುದು.
4. ಪುಸ್ತಕ ಹಾಗೂ ಬುಕ್ ಮಾರ್ಕ್ಗಳು : ಸಾಮಾಜಿಕ ಜಾಲತಾಣದ ಈ ಕಾಲದಲ್ಲೂ ಪುಸ್ತಕ ಪ್ರಿಯರೂ ಇದ್ದಾರೆ ಅನ್ನೋ ಮಾತನ್ನ ತಳ್ಳಿಹಾಕುವಂತಿಲ್ಲ. ಹೀಗಾಗಿ ನಿಮ್ಮ ಪ್ರೀತಿ ಪಾತ್ರರು ಪುಸ್ತಕ ಪ್ರಿಯರಾಗಿದ್ದರೆ ಅವರು ಇಷ್ಟ ಪಡುವ ಲೇಖಕರ ಪುಸ್ತಕದ ಜೊತೆಯಲ್ಲಿ ಕಸ್ಟಮೈಸಡ್ ಬುಕ್ಮಾರ್ಕ್ಗಳನ್ನೂ ನೀವು ಉಡುಗೊರೆಯಾಗಿ ನೀಡಬಹುದು.
5. ಕೀ ಚೈನ್ಗಳು : ಕ್ಯೂಟ್ ಕ್ಯೂಟ್ ಆದ ಕೀ ಚೈನ್ಗಳಿಗೆ ಮಾರುಕಟ್ಟೆಯಲ್ಲೇನು ಬರಗಾಲವಿಲ್ಲ. ಅದರಲ್ಲೂ ಈವಾಗ ಕಸ್ಟಮೈಸ್ಡ್ ಕೀ ಚೈನ್ಗಳದ್ದೇ ಟ್ರೆಂಡ್ ನಡೆಯುತ್ತಿದೆ. ಹೀಗಾಗಿ ನೀವು ಆನ್ಲೈನ್ ಮಾರುಕಟ್ಟೆಗಳ ಸಹಾಯದಿಂದ ನಿಮ್ಮ ಪ್ರೀತಿ ಪಾತ್ರರ ಫೋಟೋ ಇಲ್ಲವೇ ಅವರ ಹೆಸರನ್ನ ಬರೆದಿರುವಂತಹ ಕೀ ಚೈನ್ಗಳನ್ನ ತಯಾರಿಸಿ ಅದನ್ನ ಉಡುಗೊರೆಯಾಗಿ ನೀಡಬಹುದು.