ಹಾವೇರಿ: ಬ್ಯಾಡಗಿ ಎಪಿಎಂಸಿಯಲ್ಲಿ ಬ್ಯಾಡಗಿ ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದಿದ್ದು, ಕ್ವಿಂಟಾಲ್ ಗೆ ಬರೋಬ್ಬರಿ 45,111 ರೂ.ಗೆ ಮಾರಾಟವಾಗಿದೆ.
ಬ್ಯಾಡಗಿ ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ. 1 ತೊಲ ಚಿನ್ನದ ದರಕ್ಕೆ ಸರಿಸಮನಾಗಿ ಮೆಣಸಿನಕಾಯಿ ದರ ಏರಿಕೆಯಾಗಿ ದಾಖಲೆ ಬರೆದಿದೆ. ಬ್ಯಾಡಗಿ ಮಾರುಕಟ್ಟೆಯಲ್ಲಿ ಬಂಗಾರದ ದರಕ್ಕೆ ಬ್ಯಾಡಗಿ ಮೆಣಸಿನಕಾಯಿ ಮಾರಾಟವಾಗಿ ಹೊಸ ದಾಖಲೆ ಬರೆದಿದೆ.
ಗದಗ ಜಿಲ್ಲೆಯ ರೋಣ ತಾಲೂಕು ಸವಡಿ ಗ್ರಾಮದ ಬಸವರೆಡ್ಯಪ್ಪ ಬೆಳೆದ ಡಬ್ಬಿ ಮೆಣಸಿನಕಾಯಿ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ 45,111 ರೂಪಾಯಿಗೆ ಮಾರಾಟವಾಗಿದೆ. ಕಳೆದ ಎರಡು ವಾರಗಳಿಂದ ಇಲ್ಲಿನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರ ಏರುಗತಿಯಲ್ಲಿ ಸಾಗುತ್ತಿದೆ. ಗದಗ ಎಪಿಎಂಸಿಯಲ್ಲಿ ಶನಿವಾರ 41,125 ರೂಪಾಯಿಗೆ ಬ್ಯಾಡಗಿ ಮೆಣಸಿನಕಾಯಿ ಮಾರಾಟವಾಗಿ ದಾಖಲೆ ಬರೆದಿತ್ತು. ಡಿಸೆಂಬರ್ 14 ರಂದು ಇದೇ ರೈತ ಬಸವರೆಡ್ಯಪ್ಪ ಅವರು ತಂದಿದ್ದ ಮೆಣಸಿನಕಾಯಿ 35,555 ರೂ.ಗೆ ಮಾರಾಟವಾಗಿತ್ತು.