ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ 36,999 ರೂ ಮಾರಾಟವಾಗಿದೆ. ಕಡ್ಡಿ ಮೆಣಸಿನಕಾಯಿ 32,009 ರೂಪಾಯಿಗೆ ಮಾರಾಟವಾಗಿದ್ದು, ಇತಿಹಾಸದಲ್ಲಿಯೇ ದರ ಏರಿಕೆಯಲ್ಲಿ ದಾಖಲೆ ಬರೆದಿದೆ.
ಸೋಮವಾರದ ದರಕ್ಕೆ ಹೋಲಿಸಿದರೆ ನಿನ್ನೆ ಡಬ್ಬಿ ಮೆಣಸಿನಕಾಯಿ 1440 ರೂಪಾಯಿ ಹೆಚ್ಚಳವಾಗಿದೆ. ಕಡ್ಡಿ ಮೆಣಸಿನಕಾಯಿ ದರ 6000 ರೂ., ಗುಂಟೂರು ಮೆಣಸಿನಕಾಯಿ ದರ.600 ರೂ.ನಷ್ಟು ಹೆಚ್ಚಳವಾಗಿದೆ.
ಕೊರೋನಾ ಕಾರಣ, ಎಪಿಎಂಸಿ ತಿದ್ದುಪಡಿ ಗೊಂದಲ, ಅತಿವೃಷ್ಟಿ ಮೊದಲಾದ ಸಮಸ್ಯೆಗಳ ನಡುವೆಯೂ ಮೆಣಸಿನಕಾಯಿ ಬೆಳೆಗಾರರಿಗೆ ಬಂಪರ್ ಬೆಲೆ ಸಿಕ್ಕಿದೆ. ಗುರುವಾರ ಬ್ಯಾಡಗಿ ಮಾರುಕಟ್ಟೆಯಲ್ಲಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್ ಗೆ 36,999 ರೂ.ಗೆ ಮಾರಾಟವಾಗಿ ದಾಖಲೆ ಬರೆದಿದೆ ಎಂದು ಹೇಳಲಾಗಿದೆ.