ಗದಗ: ಇಲ್ಲಿನ ಎಪಿಎಂಸಿ ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಯಾಡಗಿ ಮೆಣಸಿನಕಾಯಿ ಕ್ವಿಂಟಾಲ್ ಗೆ 41,000 ರೂಪಾಯಿಗೆ ಮಾರಾಟವಾಗಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ.
ರೋಣ ತಾಲೂಕಿನ ಸವಡಿ ಗ್ರಾಮದ ರೈತರ ಸುರೇಶ ಎಂಬುವರಿಗೆ ಸೇರಿದ ಡಬ್ಬಿ ಒಣಮೆಣಸಿನಕಾಯಿ ಒಂದು ಕ್ವಿಂಟಾಲ್ ಗೆ 41,125 ರೂಪಾಯಿಗೆ ಮಾರಾಟವಾಗಿದೆ. ಬ್ಯಾಡಗಿ ಎಪಿಎಂಸಿಯಲ್ಲಿ ಗುರುವಾರ 36,999 ರೂಪಾಯಿಗೆ ಮಾರಾಟವಾಗಿದ್ದು ದಾಖಲೆಯಾಗಿತ್ತು.