ಬೆಂಗಳೂರು: ಶ್ರಾವಣ ಮಾಸ ಮುಗಿದು ಬಹುತೇಕ ಗಣಪತಿ ವಿಸರ್ಜನೆ ನಂತರ ಚಿಕನ್ ಮಟನ್ ದರ ಏರಿಕೆಯಾಗಿದೆ.
ಉತ್ಪಾದನೆ ವೆಚ್ಚ ಹೆಚ್ಚಳ, ಬೇಡಿಕೆ ಜಾಸ್ತಿಯಾಗಿರುವುದರಿಂದ ಚಿಕನ್, ಮಟನ್ ದರದಲ್ಲಿ ಕೊಂಚ ಏರಿಕೆ ಕಂಡಿದೆ. ಜೀವಂತ ಕೋಳಿ ಕೆಜಿಗೆ 95 ರೂ.ನಿಂದ 110 ರೂ.ಗೆ ಏರಿಕೆಯಾಗಿದೆ. ಗಣಪತಿ ಉತ್ಸವ ಮುಗಿದ ನಂತರ ಚಿಕನ್ ಬೆಲೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಶ್ರಾವಣ ಮಾಸದಲ್ಲಿ ಬಹುತೇಕರು ಮಾಂಸಾಹಾರ ಸೇವಿಸುವುದಿಲ್ಲ. ಗಣಪತಿ ವಿಸರ್ಜನೆಯಾಗುವವರೆಗೂ ಅನೇಕರು ಮಾಂಸಹಾರ ಮುಟ್ಟುವುದಿಲ್ಲ.
ಮುಂದಿನ ವಾರದ ವೇಳೆಗೆ ಬಹುತೇಕ ಎಲ್ಲಾ ಗಣಪತಿಗಳ ವಿಸರ್ಜನೆ ಆಗಲಿದ್ದು, ಹೀಗಾಗಿ ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ. ಶ್ರಾವಣ ಮಾಸದ ಕಾರಣದಿಂದ ಮೊಟ್ಟೆ, ಮಟನ್, ಚಿಕನ್ ದರ ಕೊಂಚ ಏರಿಕೆಯಾಗಿತ್ತು. ಈಗ ಮತ್ತೆ ದರ ಏರಿಕೆಯಾಗುವ ಸಾಧ್ಯತೆ ಇದೆ. ಕೋಳಿ, ಆಹಾರ ವಸ್ತುಗಳ ಬೆಲೆಯಲ್ಲಿ ಶೇಕಡ 25 ರಿಂದ 35ರಷ್ಟು ಏರಿಕೆಯಾಗಿದೆ. ಇಂಧನ ಬೆಲೆ ಏರಿಕೆಯಿಂದ ಸಾಗಾಟ ದರ ಕೂಡ ಹೆಚ್ಚಳವಾಗಿದೆ. ಬೇಡಿಕೆ ಕೂಡ ಹೆಚ್ಚಿರುವುದರಿಂದ ಹೀಗಾಗಿ ಚಿಕನ್, ಮಟನ್ ದರದಲ್ಲಿ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.